Join The Telegram | Join The WhatsApp |
ಮುದಗಲ್ಲ : ಹಗಲು- ಮಧ್ಯಾಹ್ನ – ರಾತ್ರಿ ಎನ್ನದೆ, ಯದ್ವಾ ತದ್ವಾ ವಿದ್ಯುತ್ ಕಡಿತ
ಸಮಯದ ಗೊತ್ತುಗುರಿ ಇಲ್ಲದೆ ಬೇಕಾಬಿಟ್ಟಿ ವಿದ್ಯುತ್ ಕಡಿತದಿಂದ ಜನ ಕಂಗೆಟ್ಟಿದ್ದಾರೆ. ಯಾವಾಗ ಕರೆಂಟ್ ತೆಗೆಯುತ್ತಾರೆ ಎಂದು ಗೊತ್ತಾಗದೆ ನಿತ್ಯದ ಕೆಲಸಗಳಿಗೆ ತೊಂದರೆಯಾಗುತ್ತಿದೆ. ಕೆಲವೊಮ್ಮೆ ಬೆಳಗ್ಗೆ ಎದ್ದಾಗಲೇ ಕರೆಂಟ್ ಇರುವುದಿಲ್ಲ, ಮಧ್ಯಾಹ್ನ –
ಕೆಲವೊಮ್ಮೆ ರಾತ್ರಿ ಕೈಕೊಡುತ್ತದೆ. ಇದರಿಂದ ಅಡುಗೆ ಮತ್ತಿತರ ಕೆಲಸಕ್ಕೂ ತೊಂದರೆ. ಆಗಾಗ ಬಂದು ಹೋಗುವ ವಿದ್ಯುತ್‌ನಿಂದ ಮಿಕ್ಸಿ, ರೆಫ್ರಿಜರೇಟರ್,ಟಿವಿ , ಕಂಪ್ಯೂಟರ್ ಮತ್ತಿತರ ಉಪಕರಣ ಕೆಟ್ಟು ಹೋಗುತ್ತಿದೆ
ಸಮಸ್ಯೆಗಳ ಸರಮಾಲೆ ಬೇಕಾಬಿಟ್ಟಿ ವಿದ್ಯುತ್ ಕಡಿತದಿಂದ ನಿತ್ಯ ಕೆಲಸಗಳಿಗೆ ತೊಂದರೆ,ಯಾವಾಗ ಬರುತ್ತದೆ, ಹೋಗುತ್ತದೆ ಎಂದು ಹೇಳಲಾಗದು,ಮೊದಲೇ ರಾಯಚೂರು ಜಿಲ್ಲೆ ಬಿಸಿಲ ನಾಡು ತಾಪಕ್ಕೆ ಕರೆಂಟ್ ಕೈಕೊಟ್ಟರೆ ನಿದ್ರೆಯೂ ಖೋತಾ 8 ದಿನ ಕೊಮ್ಮೆ ಬರುವ ನೀರು ಸರಬರಾಜಿಗೂ ಹೊಡೆತ, ಕುಡಿಯುವ ನೀರಿಗೆ ಪರದಾಟ, ಮಕ್ಕಳ ಓದಿಗೆ ತೊಂದರೆ,
ಹಿಟ್ಟಿನ ಗಿರಣಿ, ಝೆರಾಕ್ಸ್, ಸಣ್ಣ ಉದ್ಯಮಗಳಿಗೆ ಆಘಾತ, ಮೊಬೈಲ್ ಚಾರ್ಜಿಂಗ್‌ಗೂ ತೊಂದರೆ, ಈಗಲೇ ಹೀಗಾದರೆ ಬೇಸಿಗೆಯಲ್ಲಿ ಹೇಗೆ? ಜನರ ಪ್ರಶ್ನೆ.
ವಿದ್ಯುತ್ತನ್ನೇ ನಂಬಿಕೊಂಡಿರುವ ಸಣ್ಣ ವ್ಯಾಪಾರಸ್ಥರು, ಹಿಟ್ಟಿನ ಗಿರಣಿಗಳು, ಮಿಲ್‌ಗಳು, ಸಣ್ಣ ಪುಟ್ಟ ಅಂಗಡಿಗಳು, ತಂಪು ಪಾನೀಯ ಮಳಿಗೆಗಳು ಗರಿಷ್ಠ ಹೊಡೆತ ಅನುಭವಿಸುತ್ತಿದೆ.
ನೀರು ಪೂರೈಕೆ ಗೂ ತೊಂದರೆ :ಅನಿಯಮಿತ ವಿದ್ಯುತ್ ಪೂರೈಕೆಯಿಂದ ನೀರು ಸರಬರಾಜಿಗೂ ಕೆಲವು ಕಡೆ ತೊಂದರೆಯಾಗಿದೆ. ನೀರು ಎತ್ತುವ ಪಂಪ್‌ಗಳಿಗೆ ಕರೆಂಟ್ ಸಿಗದೆ ಕೆಲವು ಭಾಗಗಳಿಗೆ ರೈತರಿಗೆ ನೀರು ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ..
ಆದಷ್ಟು ಬೇಗನೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ವ್ಯಾಪಾರಸ್ಥರಿಗೆ ಹಾಗೂ ಸಾವ೯ಜನಿಕರ ಆಶಯ..
ವರದಿ: ಮಂಜುನಾಥ ಕುಂಬಾರ
Join The Telegram | Join The WhatsApp |