ಹುಕ್ಕೇರಿ:- ಉತ್ತರ ಕರ್ನಾಟಕದ ಪ್ರಸಿದ್ಧ ದಸರಾ ಆಗಿ ಇವತ್ತು ಹುಕ್ಕೇರಿ ಹಿರೇಮಠದ ದಸರಾ ಇಡೀ ವಿಶ್ವದಲ್ಲಿ ಹೆಸರಾಗಿದೆ
ದಸರಾ ಉತ್ಸವದಲ್ಲಿ ಮಕ್ಕಳ ದಸರಾ ,ಮಹಿಳಾ ದಸರಾ ,ಯುವ ದಸರಾ ,ಜಾನಪದ ದಸರಾ ,ಸಾಹಿತ್ಯ ದಸರಾ ,ಕೃಷಿ ದಸರಾ ,ಭಾವೈಕ್ಯ ದಸರಾ ಸೇರಿದಂತೆ ಗೋಷ್ಠಿಗಳು ಜರಗುವುದರ ಜೊತೆಜೊತೆಗೆ ರೇಣುಕ ಶ್ರೀ ಪ್ರಶಸ್ತಿ ಹಾಗು ಡಾ ನಾಗಲೋತಿಮಠ ಸಾಹಿತ್ಯ ರತ್ನ ಪ್ರಶಸ್ತಿ ನೀಡುತ್ತಿರುವುದು ನಮಗೆ ಅತಿ ಅಭಿಮಾನದ ಸಂಗತಿ ನಾವೆಲ್ಲರೂ ಒಟ್ಟಿಗೆ ಸೇರಿ ಉತ್ಸವವನ್ನು ಅದ್ದೂರಿಯಾಗಿ ನಡೆಸೋಣಾ ಎಂದು ಹುಕ್ಕೇರಿ ಹಿರೇಮಠ ದಸರಾ ಉತ್ಸವ ಸಮಿತಿ ಅಧ್ಯಕ್ಷರು ಹಾಗು ಹುಕ್ಕೇರಿ ಶಾಸಕ ನಿಖಿಲ ಕತ್ತಿ ಹುಕ್ಕೇರಿ ಹಿರೇಮಠದಲ್ಲಿ ನಡೆದ ದಸರಾ ಪೂರ್ವಬಾವಿ ಸಭೆಯಲ್ಲಿ ಹೇಳಿದರು
ಸಾನಿಧ್ಯವನ್ನು ವಹಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಸ್ವಾಮಿಗಳು ಎಲ್ಲ ಸಮುದಾಯದವರ ಶ್ರದ್ದಾ ಕೇಂದ್ರ ಹುಕ್ಕೇರಿ ಹಿರೇಮಠ ದಸರಾ ಉತ್ಸವವನ್ನು ಎಲ್ಲರು ಸೇರಿಕೊಂಡು ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಗರದ ಪ್ರತಿಷ್ಠಿತರಾದ ಪಿಂಟು ಶೆಟ್ಟಿ ,ಸಂಬಾಳ ,ಸಿದ್ದಲಿಂಗಪ್ಪ ಮುನೋಳಿ ,ತಮ್ಮನಗೌಡಾ ಪಾಟೀಲ ,ಪಿ ಜಿ ಕೊಣ್ಣೂರ ,ಅಣ್ಣಪ್ಪ ಸಂಬಾಳ ,ಶೀತಲ ಬ್ಯಾಳಿ ಚನ್ನಪ್ಪ ಗಜಬರ ,ಅಶೋಕ ಪಾಟೀಲ ,ಶಿವರಾಜ್ ನಾಯಿಕ ಸುರೇಶ ಜಿನರಾಳಿ ,ಸಾಗರ ಅಡಿಕೆ ,ಶಂಕರ ಪಟ್ಟಣಶೆಟ್ಟಿ, ಬಸವರಾಜ್ ನಾಯಿಕ , ಕಲಗೌಡಾ ಪಾಟೀಲ ಉಪಸ್ಥಿತರಿದ್ದು.
ವರದಿಗಾರರು:-ಶಿವಾಜಿ ಎನ್ ಬಾಲೇಶಗೋಳ