Join The Telegram | Join The WhatsApp |
ಬೆಳಗಾವಿ :- ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಆರಂಭವಾಗಿ ಮೂರು ವರೆ ತಿಂಗಳುಗಳು ಕಳೆದಿವೆ, ಇನ್ನೇನೂ ಕೆಲವೇ ದಿನಗಳಲ್ಲಿ ದಸರಾ ರಜೆ ಸಹ ಆರಂಭವಾಗುತ್ತಿದೆ
ಆದ್ರೆ ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಶೂ ಭಾಗ್ಯ ಯೋಜನೆಯಡಿ ಇನ್ನೂ ಶೂ ಗಳೇ ವಿತರಣೆ ಆಗಿಲ್ಲಾ..! ಇನ್ನೂ ಶೂ ಭಾಗ್ಯ ವಿಷಯಕ್ಕೆ ಬಂದಾಗ 2014-15 ನೇ ಸಾಲಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಹಾಗೂ ಆಗ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ರವರು ಮಕ್ಕಳಿಗೆ ಅನುಕೂಲವಾಗಲಿ ಎಂದು ಶೂ ಭಾಗ್ಯ ಯೋಜನೆ ಜಾರಿಗೆ ತೆಗೆದುಕೊಂಡು ಬಂದಿದ್ದರು, ಅಲ್ಲಿಂದ ಇಲ್ಲಿಯವರೆಗೂ ಈ ಭಾಗ್ಯ ಯೋಜನೆಯಡಿ ಸಾಕಷ್ಟು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂದಿದ್ದರು.
ಇದರ ಜೊತೆಗೆ ರಾಜ್ಯದ ಕೆಲವು ಕಡೆ ಕಳಪೆ ಗುಣಮಟ್ಟದ ಶೂಗಳು ವಿತರಣೆ ಆಗಿರುವ ಘಟನೆಗಳು ಸಹ ಬೆಳಕಿಗೆ ಬಂದಿದ್ದವು. ಈಗ ಇದರ ಮುಂದುವರಿದ ಭಾಗವಾಗಿ ಲೇಟೆಸ್ಟ್ ಸರದಿ ಏನಪ್ಪಾ ಅಂದ್ರೆ ಈ ಬಾರಿ ಸರ್ಕಾರಿ ಶಾಲೆಗಳು ಆರಂಭವಾಗಿ ಮೂರುವರೆ ತಿಂಗಳುಗಳು ಕಳೆದ್ರೂ ಇನ್ನೂ ಸಹ ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನೂ ಶೂಗಳು ವಿತರಣೆಯಾಗದೇ, ತುಂಬಾನೇ ಹರಿದು ಹೋಗಿರುವ ಶೂಗಳನ್ನೇ ಧರಿಸಿ ಶಾಲೆಗಳಿಗೆ ಬರುತ್ತಿದ್ದಾರೆ.
ಶಾಲಾ ಕ್ರೀಡಾ ಚಟುವಟಿಗಳು ಹಾಗೂ ಪಥಸಂಚಲನ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತುಂಬಾನೇ ದುಸ್ಥಿತಿಯಲ್ಲಿರುವ ಹರಿದ ಶೂ ಗಳನ್ನೇ ಹಾಕಿಕೊಂಡು ಬರುತ್ತಿದ್ದರೂ ಸಹ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಹಾಗೂ ಬೈಲಹೊಂಗಲ, ಬೆಳಗಾವಿ ಗ್ರಾಮೀಣ, ನಗರ, ಹುಕ್ಕೇರಿ, ಗೋಕಾಕ್, ಸವದತ್ತಿ ಹಾಗೂ ರಾಮದುರ್ಗ ಭಾಗಗಳ ಬಹುತೇಕ ಸರ್ಕಾರಿ ಶಾಲೆಗಳ ಆಡಳಿತ ಮಂಡಳಿಗಳು, ಕ್ಷೇತ್ರದ ಬಿ.ಇ. ಒ ಗಳು, ಸಿ.ಆರ್.ಪಿ ಗಳು ಮೌನ ವಹಿಸಿರುವುದು ನೋಡಿದ್ರೆ ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಸೇರಿದಂತೆ ಶಿಕ್ಷಣ ಸಚಿವರ ಆಪ್ತರಿಗೆ ಈ ಸಮಸ್ಯೆ ಬಗ್ಗೆ ಕರೆ ಮಾಡಿದ್ರೆ ಸರ್ಕಾರದಿಂದ ಹಣ ಬಿಡುಗಡೆಯಾಗಿ 1 ತಿಂಗಳು ಕಳೆದಿದೆ ಎಂದು ಮಾಹಿತಿ ನೀಡಿದ್ದಾರೆ. ಆದ್ದರಿಂದ ಈ ಸಮದ್ಯೆ ಬಗ್ಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ವಿಶೇಷ ಪ್ರತಿನಿಧಿ ಬಸವರಾಜು ಸಾಂದರ್ಭಿಕ ವರದಿ ತಯಾರಿಸಿ ಬೆಳಗಾವಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜು ನಾಲತವಾಡ ಅವರಿಗೆ ಕರೆ ಮಾಡಿ ಈ ಸಮಸ್ಯೆ ಯ ಬಗ್ಗೆ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ.
ಇನ್ನಾದ್ರೂ ಈ ಸರ್ಕಾರಿ ಶಾಲಾ ಮಕ್ಕಳಿಗೆ ತುರ್ತಾಗಿ ಶೂಗಳನ್ನು ವಿತರಣೆ ಮಾಡುವುದಕ್ಕೆ ಶಾಲಾ ಆಡಳಿತ ಮಂಡಳಿಗಳು ಅಲರ್ಟ್ ಆಗುವವರೇ ಎಂಬುದನ್ನು ಕಾದುನೋಡಬೇಕಿದೆ.
ವರದಿ ;- ಬಸವರಾಜು
Join The Telegram | Join The WhatsApp |