ಬೆಳಗಾವಿಯಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಈದ್ ಮೇಲಾದ ಆಚರಣೆ.
ಬೆಳಗಾವಿಯಲ್ಲಿ ಇಂದು ಸಂಭ್ರಮದ ಈರ್ ಮಿಲಾದ್ ಆಚರಣೆ ಮಾಡಲಾಗುತ್ತಿದ್ದು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಮುಸಲ್ಮಾನರ ಹಬ್ಬವನ್ನು ಆಚರಿಸಲಾಗಿದೆ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸ್ ಇಲಾಖೆಯವರು ಬಿಗಿ ಭದ್ರತೆಯೊಂದಿಗೆ ತಮ್ಮ ಕಾರ್ಯಾಚರಣೆಯನ್ನು ಮಾಡುತ್ತಿದ್ದು ಶಾಂತಿಯುತವಾಗಿ ಈದ್ ಮಿಲಾದ್ ಆಚರಣೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ ಮುಸಲ್ಮಾನ್ ಬಂಧುಗಳು ಶಾಂತಿಯುತವಾಗಿ ಆಚರಿಸುವಲ್ಲಿ ಸಹಕರಿಸುತ್ತಿದ್ದಾರೆ, ಹಾಗೂ ಎಲ್ಲಾ ಜಾತಿಯ ಮಿತ್ರರಿಗೆ ರೋಡಿನ ಬದಿ ಪಾನಕ ವ್ಯವಸ್ಥೆ ಕೂಡ ಮಾಡಲಾಗಿದ್ದು ತಮ್ಮ ಆತ್ಮೀಯತೆಯನ್ನು ತೋರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವರದಿ: ಅಭಿಷೇಕ್ ಮಳಿಮಠ