Join The Telegram | Join The WhatsApp |
ಹೊಸಪೇಟೆ : ಇಂದು ಅಂಜಮನ್ ಶಾದಿಮಹಲ್ ಕಚೇರಿಯಲ್ಲಿ ಹೊಸಪೇಟೆ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ 11 ಜನ ಪದಾಧಿಕಾರಿಗಳ ಅಯ್ಕೆಯ ಚುನಾವಣೆಗೆ ಹೆಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ರವರ ತಂಡದಿಂದ 11 ಜನರು ನಾಮಪತ್ರಗಳನ್ನು ಅಂಜುಮನ್ ಕಮಿಟಿಯ ಚುನಾವಣಾಧಿಕಾರಿಗೆ ಸಲ್ಲಿಸಿದರು
ನೂತನ ವಿಜಯನಗರ ಜಿಲ್ಲೆ ಆದ ಮೇಲೆ ನಡೆಯುವ ಮೊದಲನೆ ಬಾರಿಗೆ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ಚುನಾವಣೆ ನಡೆಯುತ್ತಿದೆ,
ಚುನಾವಣೆಗೆ ನಾಮ ಪತ್ರ ಸಲ್ಲಿಸಲು ಇದೇ ತಿಂಗಳು 21 ಕೊನೆ ದಿನವಾಗಿರುತ್ತದೆ, ಮತದಾನವು ಡಿಸೆಂಬರ್ 11 ರಂದು ನಡೆಯಲ್ಲಿದ್ದು ಅಂದೇ ಫಲಿತಾಂಶವು ಸಹ ಅಂದೇ ಘೋಷಿಸಲಿದೆ,
ಸುಮಾರು 7 ಸಾವಿರಕ್ಕೂ ಅಧಿಕ ಅಂಜುಮನ್ ಕಮಿಟಿಯ ಸದಸ್ಯರು ಇದ್ದು ಎಲ್ಲರೂ ಸಮುದಾಯದ ಒಳತಿಗೆ ತಪ್ಪದೇ ಮತದಾನ ಮಾಡುವ ಮೂಲಕ ಉತ್ತಮ ಗುಂಪಿನ ಸದಸ್ಯರನ್ನು ಪದಾಧಿಕಾರಿಗಳಾಗಿ ಅಯ್ಕೆ ಮಾಡಬೇಕು, ನಮ್ಮ ಗುಂಪಿನಿಂದ ಸ್ಪರ್ಧಿಸಿರುವ 11 ಜನರು ಸಮಾಜದಲ್ಲಿ ಉತ್ತಮರು ಹಾಗೂ ಸಮಾಜಕ್ಕೆ ಒಳಿತನ್ನು ಮಾಡುವ ಮನೋಭಾವವುಳ್ಳವಾಗಿರುತ್ತಾರೆ, ಹಾಗೂ ಈ ಹಿಂದಿ ನಮ್ಮ ಗುಂಪಿನಿಂದ ಅಂಜುಮನ್ ಕಮಿಟಿಯ ಪರವಾಗಿ ಸಮುದಾಯಕ್ಕೆ ಅನೇಕ ಸವಲತ್ತುಗಳನ್ನು ಕಲ್ಪಿಸಿರುತ್ತವೆ ಈ ಬಾರಿ ನಮ್ಮ ಗುಂಪು ಗೆಲ್ಲುತ್ತದೆ ಎಂಬ ಭರವಸೆ ಇದೆ ಎಂದು ಹೆಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ರವರು ತಿಳಿಸಿರುತ್ತಾರೆ.
ವರದಿ : ಪಿ. ಶ್ರೀನಿವಾಸ್
Join The Telegram | Join The WhatsApp |