Join The Telegram | Join The WhatsApp |
ಕಲಘಟಗಿ : ಬಿಜೆಪಿ ಪಕ್ಷ ಸಿದ್ದಾಂತಕ್ಕೆ ಎಲ್ಲರೂ ಬದ್ಧರಾಗಿ ಪಕ್ಷ ಸಂಘಟನೆ,ಬಲವರ್ಧನೆಗೆ ಪ್ರತಿಯೊಬ್ಬ ಕಾರ್ಯಕರ್ತರ ಪಾತ್ರ ಅತ್ಯಗತ್ಯ ಎಂದು ಶಾಸಕ ಸಿ.ಎಂ.ನಿoಬಣ್ಣವರ ಮಾತನಾಡಿದರು.
ತಾಲೂಕಿನ ದಾಸ್ತಿಕೊಪ್ಪದ ಹನ್ನೆರಡು ಮಠದಲ್ಲಿ ಆಯೋಜಿಸಿದ ಬಿಜೆಪಿ ಸಂಘಟನಾ ಸಭೆಯಲ್ಲಿ ಮಾತನಾಡಿ,ಪಕ್ಷದಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿದ್ದು ಇಂದಿನ ನಮ್ಮ ಪ್ರಧಾನಮಂತ್ರ ನರೇಂದ್ರ ಮೋದಿ ಕೂಡ ಸಾಮಾನ್ಯ ಕಾರ್ಯಕರ್ತರಾಗಿ ಪ್ರಧಾನಿಯಾಗಿದ್ದು,ಯಾರು ತಳಮಟ್ಟದಿಂದ ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದಾರೂ ಅಂತವರಿಗೆ ಖಂಡಿತವಾಗಿ ಪಕ್ಷದಲ್ಲಿ ಮನ್ನಣೆ ಇದೆ ಪ್ರತಿಯೊಬ್ಬ ಕಾರ್ಯಕರ್ತರೂ ಪಕ್ಷವನ್ನು ಬೆಳೆಸಬೇಕು .ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಮಹತ್ತರ ಯೋಜನೆಗಳನ್ನು ಜನರಿಗೆ ತಿಳಿಸುವ,ತಲುಪಿಸುವ ಕೆಲಸವಾಗಬೇಕು.ಇಗಾಗಲೇ ತಾಲೂಕಿನಾದ್ಯಂತ ಪ್ರತಿಯೊಂದು ಹಳ್ಳಿಗಳ ಎಸ್.ಸಿ.ಎಸ್.ಟಿ ಕಾಲೋನಿಗಳಲ್ಲಿ ಸಿ.ಸಿ.ರಸ್ತೆ,೧೨೮ ಶಾಲಾ ಕೊಠಡಿ,೧೯ ಅಂಗನವಾಡಿ ಕೊಠಡಿ,೧೬ ಹೈಸ್ಕೂಲ್ ಕಟ್ಟಡ ನಿರ್ಮಾಣ ಮಾಡಲಾಗಿದೆ ನಾನು ಶಾಸಕನಾದ ಮೇಲೆ ಮತಕ್ಷೇತ್ರದ ಅಭಿವೃದ್ಧಿಗೆ ೫೬೦ ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಲಾಗಿದ್ದು ತಾಲೂಕಿನ ಏಳಿಗೆಗಾಗಿಗೆ ಹಗಲಿರುಳು ಶ್ರಮಿಸಿದ್ದೆನೆೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಸಿಧ್ದಾಂತದ ಅನುಗುಣವಾಗಿ ಯಾರೆ ಅಭ್ಯರ್ಥಿಯಾದರು ಅದಕ್ಕೆ ಬದ್ಧನಾಗಿದ್ದು ನನ್ನ ಮಗ ಶಶಿಧರ ನಿಂಬಣ್ಣವರ ಕೂಡಾ ಪಕ್ಷದ ಟಿಕೇಟ ಆಕಾಂಕ್ಷಿಯಾಗಿದ್ದ್ಷು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಟಿಕೇಟ ಪಡೆಯಲು ಹಕ್ಕುದಾರರರಾಗಿದ್ದು ಅರ್ಹತೆಯ ಆದ್ಯತೆ ಮೆರೆಗೆ ಪಕ್ಷ ಟಕೇಟ ನೀಡುತ್ತದೆ ಎಂದರು.
ಬಿ.ಜೆ.ಪಿ ಜಿಲ್ಲಾ ಗ್ರಾಮೀಣಾ ಅಧ್ಯಕ್ಷ ಬಸವರಾಜ ಕುಂದಗೋಳಮಠ ಮಾತನಾಡಿ ರಾಜ್ಯಾಧ್ಯಕ್ಷರಾದ ನಳಿನಕುಮಾರ ಕಟೀಲ ಇವರು ಪಕ್ಷ ಸಂಘಟನೆಗಾಗಿ ರಾಜ್ಯದ್ಯಂತ ಪ್ರವಾಸ ಮಾಡುತ್ತಿದ್ದು ಬರುವ ೨೦ನೇ ತಾರಿಖಿನಂದು ಕಲಘಟಗಿ ಮತಕ್ಷೇತ್ರಕ್ಕೂ ಆಗಮಿಸಲಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯಯಲ್ಲಿ ಸಜ್ಜಾಗುವಂತೆ ತಿಳಿಸಿದರು.
ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ೨೪೦ಕೋಟಿ ಜನರಿಗೆ ಉಚಿತ ಲಸಿಕೆ ನೀಡಿದ್ದು ಹೆಮ್ಮೆಯ ವಿಷಯವಾಗಿದೆ ರಾಷ್ಟ್ರದುದ್ದಕ್ಕೂ ರಾಷ್ಟೀಯ ಹೆದ್ದಾರಿಗಳ ಕನಸನ್ನು ನನಸು ಮಾಡಿದ್ದು ನಮ್ಮ ಹೆಮ್ಮೆಯ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯ ರಾಷ್ಟ್ರದ ರಕ್ಷಣೆ ವಿಷಯದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು ನಮ್ಮ ಪಕ್ಷದಿಂದ ಮಾತ್ರ ಎಂದರು.
ಇ ಸಂಧರ್ಬದಲ್ಲಿ ತಾಲೂಕಾ ಅಧ್ಯಕ್ಷ ಬಸವರಾಜ ಶೇರೆವಾಡ, ಷಣ್ಮುಕ ಗುರಿಕಾರ, ವಿ.ಎಸ್. ಪಾಟೀಲ,ಬಸವರಾಜ ಕರಡಿಕೊಪ್ಪ, ನಿಂಗಪ್ಪ ಸುತಗಟ್ಟಿ, ಐ.ಸಿ.ಗೋಕುಲ,ಕಲ್ಲಪ್ಪ ಪುಟ್ಟಪ್ಪನವರ ಸದಾನಂದ ಚಿಂತಾಮಣ ,ಫಕ್ಕಿರೇಶ ನೇಸ್ರೆಕರ,ಶಶಿಧರ ಹುಲ್ಲಿಕಟ್ಟಿ ,ಮಲ್ಲಯ್ಯ ಗೋಡಿಮನಿ ಶ್ರೀಧರ ದ್ಯಾವಪ್ಪನವರ,ಸುರೇಶ ಶಿಲವಂತರ,ಪರಶುರಾಮ ಹುಲಿಹೊಂಡ ,ಗಂಗಾಧರ ಗೌಳಿ,ಸುನೀಲ ಗಬ್ಬೂರ, ಮಂಗಲಪ್ಪ ಲಮಾಣ , ಭೀರಪ್ಪ ಡೊಳ್ಳಿನ, ಅರ್ಜುನ ಲಮಾಣ ಕೃಷ್ಣಾ ತಹಶಿಲ್ದಾರ, ಲಕ್ಷ್ಮಣ ಮ್ಯಾಗಿನಮನಿ, ಚಂದ್ರಗೌಡ ಪಾಟೀಲ, ಹನಮಂತ ಸರಾವರಿ,ಹಾಗೂ ಕಾರ್ಯಕರ್ತರು ಇದ್ದರು.
ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |