Ad imageAd image
- Advertisement -  - Advertisement -  - Advertisement - 

ಶಿಕ್ಷಣ ಇಲಾಖೆ,ನಿವೃತ್ತ ಶಿಕ್ಷಕ ಎಮ್.ಬಿ.ವೀರಯ್ಯರ ಬೀಳ್ಕೊಡುಗೆ

Bharath Vaibhav
ಶಿಕ್ಷಣ ಇಲಾಖೆ,ನಿವೃತ್ತ ಶಿಕ್ಷಕ ಎಮ್.ಬಿ.ವೀರಯ್ಯರ ಬೀಳ್ಕೊಡುಗೆ
WhatsApp Group Join Now
Telegram Group Join Now

ಸಿರುಗುಪ್ಪ : –ನಗರದ ಗುರುಭವನದ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳ ಸಹಯೋಗದಲ್ಲಿ ಗುರುವಾರ ನಡೆದ ವಯೋನಿವೃತ್ತಿ ನಿಮಿತ್ತ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕ ಎಮ್.ಬಿ.ವೀರಯ್ಯ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಗುರಪ್ಪ ಅವರು ಅಭಿನಂದಿಸಿದರು.

ಸಿ.ಆರ್.ಪಿ ಮಂಜುನಾಥ ಅಂಗಡಿ ಮಾತನಾಡಿ ಪ್ರತಿಯೊಬ್ಬ ನೌಕರರ ವೃತ್ತಿ ಮತ್ತು ನಿವೃತ್ತಿಯ ನಡುವಿನ ವ್ಯಕ್ತಿತ್ವವು ಉತ್ತಮ ಸಮಾಜವನ್ನು ರೂಪಿಸಲು ಸಾಧ್ಯವಾಗಿದ್ದು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಿದ ಕೀರ್ತಿ ಅವರ ಕುಟುಂಬಕ್ಕೆ ಸಲ್ಲುತ್ತದೆಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹೆಚ್.ಜೆ.ಶ್ರೀಧರ ಮಾತನಾಡಿ ಹಿರಿಯರಾದ ಕರಿಬಸಯ್ಯ, ಅವರ ಮಗ ಎಮ್.ಬಿ.ವೀರಯ್ಯ, ನಂತರ ವೀರಯ್ಯರ ಮಗಳು ಎಲ್ಲಾ ವೃತ್ತಿಪರರನ್ನು ಸೃಷ್ಟಿಸುವ ಶ್ರೇಷ್ಟಕರ ಶಿಕ್ಷಕ ವೃತ್ತಿಯನ್ನು ಮುಂದುವರೆಸಿದ್ದು, ಉತ್ತಮ ಶಿಕ್ಷಣ ನೀಡುವ ಕಾಯಕ ಸಮಾಜದಲ್ಲಿ ಅತ್ಯುನ್ನತವಾದದ್ದು ಎಂದು ತಿಳಿಸಿದರು.

ಇದೇ ವೇಳೆ ತಾಲೂಕು ಪಂಚಾಯಿತಿ ವ್ಯವಸ್ಥಾಪಕಿ ಸುಜಾತ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ತಮ್ಮನಗೌಡ ಪಾಟೀಲ್, ಬಿ.ಇ.ಓ ಕಛೇರಿಯ ವ್ಯವಸ್ಥಾಪಕ ವಿಠಲ್, ಅಧೀಕ್ಷಕ ವೆಂಕಟೇಶ್ ನಾಯ್ಕ್, ನಿವೃತ್ತ ಇ.ಸಿ.ಓ ಬಸವರಾಜಯ್ಯ, ಮುಖ್ಯಗುರು ಸದಾಶಿವ ಎನ್.ಬನ್ಸೋಡಿ, ಸಹಶಿಕ್ಷಕ ಶಿವಲಿಂಗಪ್ಪ, ಅಕ್ಷರ ದಾಸೋಹದ ಶಿವಕುಮಾರ್, ಇನ್ನಿತರ ಶಿಕ್ಷಕರು, ಸಂಬಂದಿಕರು ಇದ್ದರು.

ವರದಿ:-ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
Share This Article
error: Content is protected !!