Join The Telegram | Join The WhatsApp |
ಕಲಘಟಗಿ: ತಾಲೂಕಿನಾದ್ಯಂತ ಸತತ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ರೈತರ ಬದುಕು ದುಸ್ಥಿರವಾಗಿದ್ದು ಕೂಡಲೇ ಅವರ ನೆರವಿಗೆ ಧಾವಿಸಲು ಅಧಿಕಾರಿಗಳು ಮುಂದಾಗಬೇಕು ಸರ್ಕಾರ ಯೋಜನೆಯಡಿಯಲ್ಲಿ ಸಾರ್ವಜನಿಕರ,ರೈತರ ಸಮಸ್ಯೆ ಪರಿಹಿರಿಸಲು ಅಧಿಕಾರಿಗಳು ಪ್ರಮಾಣ ಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಸಿ.ಎಂ.ನಿoಬಣ್ಣವರ ಮಾತನಾಡಿದರು.
ಅವರು ತಾಲೂಕ ಪಂಚಾಯತ ಸಭಾ ಭವನದಲ್ಲಿ ಅಕಾಲಿಕ ಮಳೆಯಿಂದ ಹಾನಿಯಾದ ಕುರಿತು ಕರೆದ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡುತ್ತ ಇಗಾಗಲೇ ರೈತರು ಬೆಳೆದ ಗೋವಿನ ಜೋಳ,ಸೋಯಾಬಿನ, ಇನ್ನಿತರೆ ಬೆಳೆ ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಿದ್ದು ಮುಂಬರುವ ದಿನಗಳು ಹಾನಿಯಾಗುವ ಎಲ್ಲ ಲಕ್ಷಣ ಕಂಡು ಬಂದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ನಿರ್ಮಾಣವಾಗಿದ್ದು ಬೆಳೆ ಹಾನಿಗೆ ರೈತರು ನೀಡುವ ಅರ್ಜಿಗಳನ್ನು ಪರಿಶೀಲಿಸಿ ಕೂಡಲೇ ಪರಿಹಾರ ನೀಡಬೇಕು ಎಂದರು.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಳೆಯಿಂದ ಸಾಕಷ್ಟು ಮನೆ ಬಿದ್ದಿದ್ದು ಸ್ಥಳಕ್ಕೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಅಂತಹ ಮನೆಗಳ ಹಾನಿಯಾದ ಪ್ರಮಾಣದ ಅನೂಸಾರವಾಗಿ ಪರಿಶೀಲಿಸಿ ಪರಿಹಾರ ಒದಗಿಸಬೇಕು. ತಾಲೂಕಿನ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು ಗುಂಡಿಗಳನ್ನು ಮುಚ್ಚವ ವ್ಯೆವಸ್ಥೆಯನ್ನು ಮಾಡಬೇಕು ಎಂದು ಸಂಬoಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ೬೩ರ ರಸ್ತೆ ಮಧ್ಯ ಅಳವಡಿಸಿದ ವಿದ್ಯುತ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ದಾರಿ ಉದ್ದಕ್ಕೂ ಕತ್ತಲು ಆವರಿಸುತ್ತಿದ್ದು ವಾಹನ ಸವಾರರಿಗೆ,ಹಾಗೂ ಪಾದಚಾರಿಗಳಿಗೆ ಅಪಘಾತಕ್ಕೆ ಕಾರಣವಾಗಿದ್ದು ಅಧಿಕಾರಿಗಳು ಗಮನಿಸಿ ಕ್ರಮ ಕೈಗೊಳ್ಳಬೇಕು ಎಂದರು.
ಸರ್ಕಾರದಿoದ ಶಾಲೆ ಹಾಗೂ ಅಂಗನವಾಡಿಗಳ ದುರಸ್ತಿಗೆ ಇಗಾಗಲೆ ಹಣ ಮಂಜೂರಾಗಿದ್ದು ಕೂಡಲೇ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಈ ಸಂಧರ್ಬದಲ್ಲಿ ತಾಲೂಕ ಪಂಚಾಯತ್ ಇ.ಓ ಭಾಗ್ಯಶ್ರೀ ಜಾಗೀರದಾರ, ತಹಶಿಲ್ದಾರ ಯಲ್ಲಪ್ಪ ಗೋಣೆಣ್ಣವರ, ಕೃಷಿ ಇಲಾಖೆ ಅಧಿಕಾರಿ ವಿಠ್ಠಲರಾವ್, ತಾ.ಪಂ ಇ.ಡಿ ಚಂದ್ರು ಪೂಜಾರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ,ಲೋಕೋಪಯೊಗಿ ಇಲಾಖೆ ಅಧಿಕಾರಿ ಸಿ.ಎಂ ಚಿಕ್ಕಮಠ, ಪ.ಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡ್ರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ಜೆ.ಯೋಗಪ್ಪನವರ, ಸಿ.ಡಿ.ಪಿ.ಓ ವೀಣಾ ಎಂ. ಪಶು ವೈದ್ಯಾಧಿಕಾರಿ ದೇವೇಂದ್ರಪ್ಪ ಲಮಾಣಿ ,ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಗೀತಾ ಬೀಳಗಿ,ಸಣ್ಣ ನೀರಾವರಿ ಶಿವಪುತ್ರಯ್ಯ ಮಠಪತಿ,ತಾಲೂಕಾ ಆರೋಗ್ಯಾಧಿಕಾರಿ ಎನ್.ಬಿ.ಕರ್ಲವಾಡ ಇದ್ದರು. ವರದಿ :ಶಶಿಕುಮಾರ ಕಲಘಟಗಿ
Join The Telegram | Join The WhatsApp |