Join The Telegram | Join The WhatsApp |
ಬೆಳಗಾವಿ: ನಗರದ ಕುವೆಂಪು ಬಡಾವಣೆಯ ಖಾಸಗಿ ಸ್ಥಳದಲ್ಲಿ ‘ಪರ್ಯಾಯ’ ಎಂಬ ಕನ್ನಡ ಚಲನಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ…
ಪರ್ಯಾಯ ಎಂಬ ಈ ಚಿತ್ರವು ಸಾಮಾಜಿಕ ಕಳಕಳಿಯ ಸಂದೇಶ ಹೊಂದಿದ್ದು, ಮುಗ್ಧ ಮನಸುಗಳ ತೊಳಲಾಟದ ಕಥಾಹಂದರ ಹೊಂದಿದೆ,,, ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳೇ ಈ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದು, ತಂತ್ರಜ್ಞರು ಬೆಂಗಳೂರಿನ ಕಡೆಯವರು ಕೆಲಸ ಮಾಡುತ್ತಿದ್ದಾರೆ.
ಕಲೆ ಮತ್ತು ಸಂಸ್ಕೃತಿಕ ಕೆಲಸಗಳಿಗೆ ಸದಾ ಬೆಂಬಲ ನೀಡುತ್ತಾ ಬಂದಿರುವ ಬೆಳಗಾವಿಯ ಮಾಜಿ ಶಾಸಕರಾದ ರಮೇಶ ಕುಡಚಿ ಅವರು ಕೊನೆಯ ಹಂತದ ಚಿತ್ರೀಕರಣಕ್ಕೆ ಕ್ಲಾಪ್ ಮಾಡುವುದರ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಆಗಲಿ ಎಂದು ಹಾರೈಸಿದರು…
ಬೆಳಗಾವಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರವನ್ನು ಬೆಂಗಳೂರಿನ ರಮಾನಂದ ಮಿತ್ರಾ ಅವರು ನಿರ್ದೇಶನ ಮಾಡುತ್ತಿದ್ದು, ನಿರ್ಮಾಪಕರಾಗಿ ನಮ್ಮ ಬೆಳಗಾವಿಯ ಹೆಮ್ಮೆಯ ಬಹುಮುಖ ಪ್ರತಿಭೆಯ, ಪ್ರತಿಭಾ ಪ್ರೋತ್ಸಾಹಕಾರರು ಆದ ಶಿವಪೂಜೆಮಠ ಸರ ಅವರು ನಿರ್ಮಾಣ ಮಾಡುತ್ತಿದ್ದಾರೆ..
ಬೆಳಗಾವಿಯ ಶಿವಪೂಜೆಮಠ ಸರ ಅವರು ಗಡಿಕನ್ನಡಿಗ ಎಂಬ ದಿನಪತ್ರಿಕೆಯ ಸಂಪಾದಕರಾಗಿದ್ದು, ಅನೇಕ ಸಮಾಜಮುಖಿ ಹಾಗೂ ಜನಪರ ಕಾರ್ಯಗಳಲ್ಲಿ ತಮ್ಮನ್ನು ತಾವು ಸದಾಕಾಲ ತೊಡಗಿಸಿಕೊಂಡಿರುತ್ತಾರೆ, ಅದೇರೀತಿ ನಟನೆ, ಕಲೆ ಎಂಬುದನ್ನು ಬಹಳ ಹಚ್ಚಿಕೊಂಡು ಈ ಹಿಂದೆ ಅವರು ಹಲವಾರು ಚಿತ್ರಗಳನ್ನು ನಿರ್ಮಿಸಿ, ಅದರಲ್ಲಿ ನಟನೆ ಕೂಡಾ ಮಾಡಿದ್ದಾರೆ..
ಬೆಳಗಾವಿಗೆ ಹೆಮ್ಮೆ ತರುವಂತೆ ಇವರು ಈ ಹಿಂದೆ ನಿರ್ಮಿಸಿದ ಚಿತ್ರಗಳೆಂದರೆ,, ಬಂಗಾರದ ಮಕ್ಕಳು, ಹೋರಾಟ, ಕೊನೆಯಪುಟ, ಬೆಳಕಿನ ಕನ್ನಡಿ ಇನ್ನು ಅನೇಕ ಚಿತ್ರಗಳಲ್ಲಿ ನಿರ್ಮಾಪಕರಾಗಿ, ಸಹನಿರ್ಮಾಪಕರಾಗಿ ಆ ಮೂಲಕ ಅನೇಕ ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದಾರೆ….
ಈಗ ಪರ್ಯಾಯ ಎಂಬ ಈ ಚಿತ್ರವನ್ನು ನಿರ್ಮಿಸುತ್ತಿದ್ದು ಇದರ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು ಇನ್ನೇನು ಚಿತ್ರ ಪೂರ್ಣಗೊಂಡು ಉತ್ತಮ ಸಾಮಾಜಿಕ ಸಂದೇಶ ನೀಡುವಂತ ಚಿತ್ರವಾಗಿ ಹೊರಹೊಮ್ಮುತ್ತದೆ ಎಂದು ಎಲ್ಲರ ಆಶಯವಾಗಿದೆ….
ವರದಿ: ಪ್ರಕಾಶ ಕುರಗುಂದ.
Join The Telegram | Join The WhatsApp |