Join The Telegram | Join The WhatsApp |
ಕೊನೆಗೂ ರಾಜ್ಯ ಸರ್ಕಾರ ಸುವರ್ಣ ಸೌಧದ ವಿಧಾನಸಭೆಯ ಕಲಾಪದ ಹಾಲ್ನಲ್ಲಿ ವೀರ ಸಾವರ್ಕರ್ ಫೋಟೋವನ್ನ ಅನಾವರಣ ಮಾಡಿದೆ. ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಸಾವರ್ಕರ್ ಫೋಟೋಗಳನ್ನ ಅನಾವರಣ ಮಾಡಲಾಗಿದೆ.
ಸಾವರ್ಕರ್ ಜೊತೆಗೆ ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ನೇತಾಜಿ, ಸರ್ದಾರ್ ವಲ್ಲಭ್ ಬಾಯ್ ಪಟೇಲ್, ಸ್ವಾಮಿ ವಿವೇಕಾನಂದ, ಬಸವಣ್ಣರ ಫೋಟೋಗಳನ್ನೂ ಕೂಡ ಇದೇ ವೇಳೆ ಅನಾವರಣ ಮಾಡಲಾಗಿದೆ.
ಸಾವರ್ಕರ್ ಫೋಟೋ ಹಾಕೋದನ್ನ ಕಾಂಗ್ರೆಸ್ ಖಂಡಿಸುತ್ತದೆ ಎಂಬ ಭಾವಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರದ ವಿರುದ್ಧ ಹೊಸ ಅಸ್ತ್ರವನ್ನ ಹೂಡಿರುವ ಕಾಂಗ್ರೆಸ್, ಸಾವರ್ಕರ್ ಫೋಟೋ ಜೊತೆಗೆ ಎಲ್ಲಾ ಮಹಾನೀಯರ ಫೋಟೋಗಳನ್ನೂ ಹಾಕಬೇಕು ಎಂದು ಆಗ್ರಹಿಸಿದೆ.
ಜವಾಹರ್ ಲಾಲ್ ನೆಹರು, ಶಿಶುನಾಳ ಷರೀಫ್, ಕುವೆಂಪು, ನಾರಾಯಣ ಗುರು, ಕನಕದಾಸರ ಭಾವಚಿತ್ರ ಹಾಕಬೇಕು ಎಂದು ಕಾಂಗ್ರೆಸ್ ಆರೋಪಿಸಿದೆ.
Join The Telegram | Join The WhatsApp |