Join The Telegram | Join The WhatsApp |
ಅಥಣಿ : ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹೆರಿಗೆ ಮಾಡಿಸಲು ಐದು ಸಾವಿರ ರೂಪಾಯಿ ಹಣ ಪಡೆಯುತ್ತಿದ್ದಾರೆ. ಸಂಬಂಧಪಟ್ಟ ವೈದ್ಯರ ಹಾಗೂ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಿ ಎಂದು ಡಿಎಸ್ ಎಸ್ ತಾಲೂಕು ಸಂಚಾಲಕ ಪಾರೀಶ್ ಗೊಂದಳ ಆಗ್ರಹಿಸಿರು.
ಅವರು ತಾಲೂಕಿನ ಯಕ್ಕಂಚಿ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಆರೋಪಿಸಿದರು. ಅಥಣಿ ತಹಶೀಲ್ದಾರ್ ಸುರೇಶ ಮುಂಚೆ ಅಧ್ಯಕ್ಷತೆಯಲ್ಲಿ ನಡೆದ ಕಂದಾಯ ಇಲಾಖೆಯ ಮಹತ್ವಾಕಾಂಕ್ಷೆ ಯೋಜನೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅನೇಕ ಸಮಸ್ಯೆಗಳು ಚರ್ಚೆಗೆ ಬಂದವು. ಯಕ್ಕಂಚಿ ಗ್ರಾಮದ ಕೃಷಿ ಸೇವಾ ಕೇಂದ್ರದಲ್ಲಿ ಬೀಜ ಗೊಬ್ಬರ ಕೀಟನಾಶಕವನ್ನು ಹೆಚ್ಚಿನ ದರ ನೀಡಿ ಕೊಂಡುಕೊಳ್ಳುವ ಪರಿಸ್ಥಿತಿ ಇದೆ. ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗುರ್ಗಪ್ಪ ಗೊಂದಳೆ ಆರೋಪಿಸಿದರು.
ಯಲಿಹಡಲಗಿ ಗ್ರಾಪಂ ಕಂಪ್ಯೂಟರ್ ಆಪರೇಟರ್ ಸರಿಯಾಗಿ ಕೆಲಸ ಮಾಡದ ಕಾರಣ ನರೇಗಾ ಬಿಲ್ ಆಗುತ್ತಿಲ್ಲಾ , ಆತನನ್ನು ಕಿತ್ತೊಗೆದು ಬೇರೆಯವರನ್ನು ನೇಮಕ ಮಾಡಿ ಕೊಳ್ಳಬೇಕೆಂದು ಶ್ರೀಶೈಲ ಗೊಂದಳೆ ಆರೋಪಿಸಿದರು. ಪಶು ವೈದ್ಯರನ್ನು ಗ್ರಾಮಕ್ಕೆ ಬರುವಂತೆ ಕ್ರಮವಹಿಸಬೇಕು , ದ್ರಾಕ್ಷಿ ಬೆಳೆ ಹಾನಿಯಾದರೆ ಎಲ್ಲ ರೀತಿಯ ಸಹಾಯ, ಪರಿಹಾರ ವಿಮಾ ಮೆಕ್ಕೆಜೋಳ, ಅಲಸಂದಿ, ಹೆಸರು, ತೊಗರಿ ಸೇರಿದಂತೆ ಕೃಷಿ ಇಲಾಖೆಗೆ ಸಂಬಂಧಪಟ್ಟಂತೆ ಬೆಳೆಗೂ ಕೂಡಾ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಅಥಣಿ ತಹಶೀಲ್ದಾರ್ ಸುರೇಶ ಮುಂಜೆ , ಜಿಪಂ ಎಂಇ ವೀರಣ್ಣ ವಾಲಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.
Join The Telegram | Join The WhatsApp |