ಗುಜರಾತ್ : ಗುಜರಾತ್ ನ ಸೂರತ್ ನಲ್ಲಿ ನಕಲಿ ಡಾಕ್ಟರ್ ಸರ್ಟಿಫಿಕೇಟ್ ನೀಡ್ತಿದ್ದ 14 ಮಂದಿ ನಕಲಿ ವೈದ್ಯರು ಪೊಲೀಸರ ಖೆಡ್ಡಾಗೆ ಬಿದ್ದಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಈ ಗ್ಯಾಂಗ್ ಫೇಕ್ ಡಿಗ್ರಿ ಸರ್ಟಿಫಿಕೇಟ್ ಗಳನ್ನ ನೀಡುತ್ತಿತ್ತು. ಕೇವಲ 70 ಸಾವಿರ ರೂ ಗೆ ಬಿಕರಿ ಮಾಡಿರೋದು ವಿಚಾರಣೆ ವೇಳೆ ಗೊತ್ತಾಗಿದೆ.8 ನೇ ತರಗತಿ ಓದಿದ ಜನರಿಗೂ ಫೇಕ್ ಡಾಕ್ಟರ್ ಸರ್ಟಿಫಿಕೇಟ್ ನೀಡಲಾಗಿದೆ.
ಡಾ. ರಮೇಶ್ ಗುಜರಾತಿ ಪ್ರಮುಖ ಆರೋಪಿಯಾಗಿದ್ದಾರೆ. ಎಲ್ಲರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಗ್ಯಾಂಗ್ ನ ಕಾರ್ಯಚಟುವಟಿಕೆ ಬಗ್ಗೆ ತೀವ್ರ ನಿಗಾವಹಿಸಿತ್ತು. ಸಾಕಷ್ಟು ಪ್ಲಾನ್ ಮಾಡಿ ಗ್ಯಾಂಗ್ ಮೇಲೆ ದಾಳಿ ಮಾಡಲಾಗಿದೆ.