Join The Telegram | Join The WhatsApp |
ಹುಬ್ಬಳ್ಳಿ : ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಸಿಕ್ಕಿದೆ ಎಂದು, ಜನರಿಗೆ ತಪ್ಪು ಮಾಹಿತಿಯನ್ನು ಬಿಜೆಪಿ ಹರಡಿಸಿ ಬಿಟ್ಟಿ ಪ್ರಚಾರ ಪಡೆಯುವ ಹುನ್ನಾರ ನಡೆಸಿದೆ ಎಂದು ನವಲಗುಂದ ಮಾಜಿ ಶಾಸಕ ಎನ್ ಹೆಚ್ ಕೊನರೆಡ್ಡಿ ಆರೋಪಿಸಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹದಾಯಿ ವಿಚಾರ ಕುರಿತು ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯ ಅವರು ಯೋಜನೆಯ ಸದ್ಯದ ಸ್ಥಿತಿಗತಿಯ ಬಗ್ಗೆ, ತಕ್ಷಣ ಸರ್ವಪಕ್ಷ ಹಾಗೂ ಹೋರಾಟಗಾರರ ಸಭೆ ಕರೆದು ಸ್ಪಷ್ಟಿಕರಣ ನೀಡಬೇಕು. ಇಲ್ಲವಾದರೇ ಮತ್ತೆ ಯೋಜನೆಗಾಗಿ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡಿಪಿಆರ್‌ಗೆ ಅನುಮತಿ ಸಿಕ್ಕಿದೆ ಎಂದು ಪ್ರಚಾರ ಪಡೆಯು ಹುನ್ನಾರ:
ಈಗಾಗಲೇ ಮಹದಾಯಿ ನ್ಯಾಯಾಧೀಕರಣ 13.42 ಟಿಎಂಸಿ ನೀರನ್ನು ರಾಜ್ಯಕ್ಕೆ ಗೋವಾದವರಿಗೆ 24 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ನೀಡಿದ ನಂತರ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕೇಂದ್ರ ಸರ್ಕಾರ 2020 ಫೆ.27 ರಂದು ಅಧಿಸೂಚನೆ ಹೊರಡಿಸಿತು. ಆದರೆ ವರ್ಷ ಕಳೆದರೂ ಬಿಜೆಪಿ ಯಾವುದೇ ಕ್ರಮ ಜರುಗಿಸದೇ ಸುಮ್ಮನಿದ್ದು, ಇದೀಗ ಏಕಾಏಕಿ ಡಿಪಿಆರ್ ಅನುಮತಿ ಸಿಕ್ಕಿದೆ ಎಂದು ಪ್ರಚಾರ ಪಡೆಯು ಹುನ್ನಾರ ನಡೆಸಿದೆ ಎಂದು ದೂರಿದರು.
ಹಿ.ನ್ಯಾಯವಾದಿ ಮೋಹನ್ ಕಾತರಕಿ ಡಿಪಿಆರ್ ಕೇವಲ ಅರಣ್ಯ ಇಲಾಖೆ ಅನುಮತಿ ಪಡೆಯಲಷ್ಟೇ ಅನುಕೂಲ:
ಆದರೆ ಯೋಜನೆ ಬಗ್ಗೆ ರಾಜ್ಯದಿಂದ ವಾದ ಮಾಡಿದ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ ಅವರು ಡಿಪಿಆರ್ ಕೇವಲ ಅರಣ್ಯ ಇಲಾಖೆ ಅನುಮತಿ ಪಡೆಯಲು ಮಾತ್ರ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಬಿಜೆಪಿಯ ಈಗೀಗ ನಡೆ ನೋಡಿದ್ದರೆ, ಇವರು ಬಿಟ್ಟಿ ಪ್ರಚಾರಕ್ಕೆ ಈ ರೀತಿ ನಡೆ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ವರದಿ:ವಿನಾಯಕ ಏನ್ ಗುಡ್ಡದಕೇರಿ
Join The Telegram | Join The WhatsApp |