Join The Telegram | Join The WhatsApp |
ಬೆಳಗಾವಿ: ನಗರದ ಕುವೆಂಪು ನಗರದಲ್ಲಿರುವ ತಮ್ಮ ಮನೆಯಲ್ಲಿ ಸರಳ ಸಾಂಪ್ರದಾಯಿಕ, ಶೃದ್ಧಾ ಭಕ್ತಿಯಿಂದ ಗಣೇಶ ಚತುರ್ಥಿಯನ್ನು ಆಚರಿಸಿದ ಬೆಳಗಾವಿ ನಗರದ ಮಾಜಿ ಶಾಸಕರಾದ ರಮೇಶ ಕುಡಚಿಯವರು ಮಾದ್ಯಮದವರೊಂದಿಗೆ ಮಾತನಾಡಿದರು..
ಈ ವೇಳೆ ಮಾಜಿ ಶಾಸಕರು ಬೆಳಗಾವಿ ನಗರದ ಎಲ್ಲ ಜನರಿಗೆ ಗಣೇಶ ಚತುರ್ಥಿಯ ಶುಭಾಶಯ ತಿಳಿಸಿದರು, ಇಂದು ಜನರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದು, ಮುಂದಿನ ದಿನಗಳಲ್ಲಿ ಒಳ್ಳೆಯ ಸಮಯ ಬಂದು, ಎಲ್ಲಾ ಜನರು ಒಗ್ಗಟ್ಟಿನಿಂದ ಬಾಳಿ, ಅಭಿವೃದ್ದಿ ಆಗಿ, ಸರ್ವರಿಗೂ ಕಲ್ಯಾಣವಾಗಲಿ ಎಂದರು…
ಗಣೇಶ ಚತುರ್ಥಿಯನ್ನು ಶೃದ್ಧಾ ಭಕ್ತಿಯಿಂದ ಸಮಾಧಾನವಾಗಿ, ಯಾರಿಗೂ ತೊಂದರೆ ಆಗದಂತೆ, ಕಾನೂನು ಮತ್ತು ಸುವ್ಯವಸ್ಥೆಗೆ ಅನುಗುಣವಾಗಿ, ಸುರಕ್ಷಿತವಾಗಿ ಆಚರಣೆ ಮಾಡಲು ಭಕ್ತರಲ್ಲಿ ವಿನಂತಿ ಮಾಡಿಕೊಂಡರು..
ವರದಿ : ಪ್ರಕಾಶ ಕುರಗುಂದ
Join The Telegram | Join The WhatsApp |