ಚಿಕ್ಕೋಡಿ : ಮಾಜಿ ವಿಧಾನ ಪರಿಷತ್ ಸದಸ್ಯ, ಕೆಎಲ್ಇ ಸಂಸ್ಥೆಯ ನಿರ್ದೇಶಕರು, ಚಿದಾನಂದ ಬಸಪ್ರಭು ಕೊರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರು, ಬಿಜೆಪಿಯ ಹಿರಿಯ ಮುಖಂಡರು ಮಹಾಂತೇಶ್ ಕವಟಗಿಮಠ ಅವರ 59 ನೇ ಹುಟ್ಟ ಹಬ್ಬವು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಹುಟ್ಟು ಹಬ್ಬದ ಪ್ರಯುಕ್ತ ನಗರದ ಕೇ ಎಲ್ ಈ ಆಸ್ಪತ್ರೆಯಲ್ಲಿ ಉಚಿತ ರಕ್ತದಾನ ಶಿಬಿರ ಹಾಗೂ ಕ್ಯಾನ್ಸರ್ ಚಿಕಿತ್ಸೆ ಶಿಬಿರ ಆಯೋಜಿಸಲಾಗಿತ್ತು. ಅನಂತರ ನಗರದ ಕಿವುಡ ಮೈದಾನದ ಹತ್ತಿರ ಶ್ರೀ ಮಹಾಂತೇಶ್ ಕವಟಗಿಮಠ್ ಸೌಹಾರ್ಧ ಸಹಕಾರಿ ಸಂಸ್ಥೆಯ ಚಿಕ್ಕೋಡಿ ಶಾಖೆಯ ಉದ್ಘಾಟನೆ ಮಾಡಲಾಯಿತು.
ಅನಂತರ ನಗರದ ಪದ್ಮ ಮಂಗಳ ಕಾರ್ಯಾಲಯದಲ್ಲಿ ಹುಟ್ಟುಹಬ್ಬ ಕಾರ್ಯಕ್ರವು ನಿಡ್ಸೋಶಿಯ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾ ಸ್ವಾಮೀಜಿ ಅವರು ಉದ್ಘಾಟಿಸಿದರು, ಅದೇ ರೀತಿ ಶೆಗುಣಸಿಯ ಶ್ರೀ ಮಹಾಂತ ಸ್ವಾಮೀಜಿಗಳು ಹಾಗೂ ಚಿಕ್ಕೋಡಿಯ ಶ್ರೀ ಸಂಪಾದನಾ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯ ಲಭಿಸಿತ್ತು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಹಾಂತೇಶ್ ಕವಟಗಿಮಠ, ಮುಖಂಡ ಜಗದೀಶ್ ಕವಟಗಿಮಠ, ಪುರಸಭೆ ಅಧ್ಯಕ್ಷ ಶ್ರೀಮತಿ ವೀಣಾ ಕವಟಗಿಮಠ, ಉಪಾಧ್ಯಕ್ಷ ಇರ್ಫಾನ್ ಬೆಪಾರಿ, ವಿಎಸ್ಎಂ ಸಂಸ್ಥೆಯಾ ಅಧ್ಯಕ್ಷ ಚಂದ್ರಕಾಂತ್ ಕೋಟಿವಾಲೆ, ಚಿಕ್ಕೋಡಿ ಸಿಬಿ ಕೆ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋಟಿವಾಲೆ , ಸಂಸ್ಥೆಯಾ ಅಧ್ಯಕ್ಷ ಶರತ್ ಚಂದ್ರ ಕೌಟಿಗಿಮಠ, ಉಪಾಧ್ಯಕ್ಷ ರಾಜೇಂದ್ರ ಮುತ್ತಗೆಕರ್, ಸ್ಥಳೀಯ ಅಧ್ಯಕ್ಷ ಸುಭಾಷ್ರ Arbhaavi ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿದ್ದ ಸಂಘ ಸಂಸ್ಥೆಗಳ ಪ್ರಮುಖರು, ರಾಜಕೀಯ ಶೈಕ್ಷಣಿಕ ಸಾಮಾಜಿಕ ಕ್ಷೇತ್ರದ ಗಣ್ಯರು, ಸ್ನೇಹಿತರು, ಸಂಬಂಧಿಕರು, ಕವಟಿಗಿಮಠ ಅಭಿಮಾನಿಗಳು ಶುಭಾಶಯಗಳು ಕೋರಿದರು.
ಈ ಸಂದರ್ಭದಲ್ಲಿ ಮುಖಂಡ ಉತ್ತಂ ಪಟೀಲ್, ಚಿಕ್ಕೋಡಿ ಸಕ್ರೆ ಕಾರ್ಖಾನೆಯ ನಿರ್ದೇಶಕ ಅಜಿತ ದೇಸಾಯಿ, ಭರತೇಶ್ ಬನಾವಣೆ, ಮಲ್ಲಪ್ಪ ಮಹಿಶಾಲೆ, ಪ್ರಕಾಶ್ ಪಾಟೀಲ್, ಸಿಟಿ ಈ ಸಂಸ್ಥೆಯ ಉಪಾಧ್ಯಕ್ಷ ವಿಜಯ ಮಂಜರೆಕರ, ಓಂಕಾರ ಕುಲಕರ್ಣಿ, ಮಿಥುನ್ ದೇಶ್ಪಾಂಡೆ, ಪೂಪಟಲಾಲ್ ಶಾ, ಸಂಜಯ್ ಕೋಟ್ಗಿಮಟ್, ಗುಲಾಬ್ಸನ್ ಭಗವಾನ್, ಸಾಬಿರ ಜಮಾದಾರ, ರಾಮ ಮಾನೆ, ಅನಿಲ್ ಮಾನೆ, ರಂಜಿತ ದೇಸಾಯಿ, ವಿಕ್ರಂ ದೇಸಾಯಿ,. ಸಂತೋಷ್ ಟವಳೇ, ವಿಶ್ವನಾಥ್ ಕಮತೆ, ಅಜಯ್ ಕೌಟಿಗಿಮಠ, ಮಹೇಶ್ ಬಾತೆ, ವಿಜಯ್ ಕೋಟಿವಾಲೆ, ಶೀತಲ ಯಾದವ್, ರಾಮ ಬನ್ನಟ್ಟಿ, ನಾಗರಾಜ್ ಮೆದಾರ, ಪ್ರಕಾಶ್ ಪಾಟೀಲ್, ಸಂಜಯ ಪಾಟೀಲ್, ಬಸವರಾಜ್ ಬಸವಗೂಳ ,ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ