Join The Telegram | Join The WhatsApp |
ಬೆಂಗಳೂರು: ಪೀಣ್ಯ ದಾಸರಹಳ್ಳಿ ಧರ್ಮ ಅಥವಾ ಅಧ್ಯಾತ್ಮದಿಂದ ಅಜ್ಞಾನದಿಂದ ಜ್ಞಾನದ ಕಡೆ ಕೊಂಡೊಯ್ಯು ಅರ್ಥವೇ ಸತ್ಸಂಗದ ವಿಚಾರಗಳು ಜೀವನಕ್ಕೆ ಅವಶ್ಯಕ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಹೇಳಿದರು.
ಲಗ್ಗೆರೆಯಲ್ಲಿ ಡಾ. ವಿಷ್ಣುವರ್ಧನ್ ಆಟದ ಮೈದಾನದಲ್ಲಿ ಮಾಜಿ ಪಾಲಿಕೆ ಸದಸ್ಯೆ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ ಹಾಗೂ ಅರ್ಪಿತ ಸೇವಾ ಟ್ರಸ್ಟ್ ಹಾಗೂ ಕಾಂಗ್ರೆಸ್ ಪ್ರಭಾವಿ ಮುಖಂಡ ಲಗ್ಗೆರೆ ನಾರಾಯಣ ಸ್ವಾಮಿ ಅವರ ನೇತೃತ್ವದಲ್ಲಿ ಸತ್ಸಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀಗಳು ತಮ್ಮ ಮಧುರ ಕಂಠದಿಂದ ಸಂಗೀತ ಸುಂದರ ಗಾಯನ ಮೂಲಕ ಸತ್ಸಂಗದ ವಿಚಾರಗಳು ಜೀವನದಲ್ಲಿ ಅಳವಡಿಸಿ ಕೊಂಡು ಹೋಗ ಬೇಕು ಎಂದು ಡಾ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಆಶೀರ್ವಚನ ನೀಡಿದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾ ನಂದನಾಥ ಮಹಾ ಸ್ವಾಮೀಜಿ ರವರಿಗೆ ಸಾವಿರಾರು ಮಹಿಳಾ ಮುತೈದವರು ಕಳಸವನ್ನು ಹೊತ್ತುಕೊಂಡು ಲಗ್ಗೆರೆ ಸರ್ಕಲ್ ಯಿಂದ ಸತ್ಸಂಗ ಕಾರ್ಯಕ್ರಮ ವೇದಿಕೆ ಮೆರವಣಿಗೆ ಮೂಲಕ ಶ್ರೀಗಳಿಗೆ ಕರೆದುಕೊಂಡು ಬರಲಾಯಿತು.
ಲಗ್ಗೆರೆ ನಾರಾಯಣ ಸ್ವಾಮಿ ಸರ್ವರಿಗೂ ಸ್ವಾಗತಿಸಿದರು.
ಶ್ರೀಮತಿ ಮಂಜುಳಾ ನಾರಾಯಣ ಸ್ವಾಮಿ ಅವರ ಕುಟುಂಬದ ಸದಸ್ಯರು ಸೇರಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾ ನಂದನಾಥ ಮಹಾ ಸ್ವಾಮೀಜಿ ರವರಿಗೆ ಪಾದ ಪೂಜೆ ಪುಷ್ಪಾರ್ಚನೆ ಮಹಾ ಮಂಗಳಾರತಿ ನೆರವೇರಿಸಿ ಶ್ರೀಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕಿ ಕುಸುಮ, ದಾಸರಹಳ್ಳಿ ನಗರ ಸಭಾ ಮಾಜಿ ಅಧ್ಯಕ್ಷ ಅಂದಾನಪ್ಪ, ಮಾಜಿ ನಗರಸಭಾ ಅಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಹನುಮಂತರಾಯಪ್ಪ, ಪಾಲಿಕೆ ಮಾಜಿ ಸದಸ್ಯ ವೇಲು ನಾಯ್ಕ್, ಲಗ್ಗೆರೆ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಹನುಮಂತೆ ಗೌಡ ಸೇರಿದಂತೆ ಲಗ್ಗೆರೆ ವಾರ್ಡ ಸೇರಿದಂತೆ ವಿವಿಧ ಕಡೆಯಿಂದ ಕಾಂಗ್ರೆಸ್ ಮುಖಂಡರು ಮಹಿಳೆಯರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮುಂತಾದವರು ಇದ್ದರು.
ವರದಿಗಾರರು ಅಯ್ಯಣ್ಣ ಮಾಸ್ಟರ್
Join The Telegram | Join The WhatsApp |