ಕಲಬುರ್ಗಿ: ರಾಜ್ಯದಲ್ಲಿ ಕೊರತೆಯಿರುವ ಪೊಲೀಸ್ ಸಿಬ್ಬಂದಿಗಳ ಬಗ್ಗೆ ಮೌನ ಮುರಿದಿರುವ ಗೃಹಸಚಿವ ಪರಮೇಶ್ವರ್ 6-7 ತಿಂಗಳಲ್ಲಿ 1,200 ಪಿಎಸ್‌ಐಗಳ ನೇಮಕಾತಿ ಮಾಡುತ್ತೇವೆ ಎಂದಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿರುವ ಗೃಹಸಚಿವ ಪರಮೇಶ್ವರ್ ರಾಜ್ಯದಲ್ಲಿ 10-12 ಸಾವಿರ ಪೊಲೀಸ್ ಸಿಬ್ಬಂದಿ ಕೊರತೆಯಿದೆ.ಅದನ್ನು ಭರ್ತಿ ಮಾಡುತ್ತೇವೆ. ಆರು ತಿಂಗಳೊಳಗೆ 1,200 ಪಿಎಸ್‌ಐಗಳನ್ನು ನೇಮಕ ಮಾಡುತ್ತೇವೆ ಎಂದಿದ್ದಾರೆ.
ಮತ್ತೊಂದೆಡೆ ಬಿಜೆಪಿಯವರು ಕಾನೂನು ವ್ಯವಸ್ಥೆ ಹಾಳಾಗಿದೆ ಅನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪರಮೇಶ್ವರ್ ಸುಮ್ಮನೇ ಜನರಲ್ ಆಗಿ ಆರೋಪಗಳನ್ನ ಮಾಡಬಾರದು ಅವರ ಕಾಲದಲ್ಲಿ ಎಷ್ಟು ಆಗಿದೆ ಎಂಬ ಬಗ್ಗೆ ದಾಖಲೆ ಇದೆ. ಅದನ್ನ ಸಮಯ ಬಂದಾಗ ನಾವು ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಮಂಗಳೂರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 48 ಗಂಟೆಯಲ್ಲಿ ಮಂಗಳೂರು ದರೋಡೆ ಕೇಸ್ ಬೇಧಿಸಿದ್ದೇವೆ. ಬೀದರ್ ದರೋಡೆ ಕೇಸ್ ಕೂಡ ಕೊನೆಯ ಹಂತದಲ್ಲಿದೆ. ಆದಷ್ಟು ಬೇಗ ನಮ್ಮ ಪೊಲೀಸರು ಅವರನ್ನು ಕೂಡ ಅರೆಸ್ಟ್ ಮಾಡುತ್ತಾರೆ ಎಂದು ಸಚಿವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.