ಮಲ್ಲಮ್ಮನ ಬೆಳವಡಿ:-ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮ ಪಂಚಾಯತಿಗೆ 2022-23 ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ.
ಸೋಮವಾರ ರಂದು ಬೆಂಗಳೂರು ವಿಧಾನಸೌದದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರು ಮಹಾತ್ಮ ಗಾಂಧಿ ಜಯಂತಿ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತಿ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರು ಪ್ರಶಸ್ತಿಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷೆ ರಾದ ಗೀತಾ ಮಹಾಂತೇಶ ಮಡಿವಾಳರ ಉಪಾಧ್ಯಕ್ಷೆ ರಾದ ಶಾಂತಾ ವಿನಾಯಕ ಬಡಿಗೇರ ಪಿಡಿಓ ಕಾಳಪ್ಪ ಕಂಬಾರ ಅವರಿಗೆ ನೀಡಿದರು.
ಬೈಲಹೊಂಗಲ ತಾಲೂಕಿನಲ್ಲಿ ಈ ವರ್ಷ ಗಾಂಧಿ ಪುರಸ್ಕಾರ ಪ್ರಶಸ್ತಿ ಪಡೆದ ಏಕೈಕ ಗ್ರಾಮ ಪಂಚಾಯತಿ ಉಡಿಕೇರಿ ಯಾಗಿದೆ ಇದರಿಂದ ಉಡಿಕೇರಿ ಬೂದಿಹಾಳ ಮೂಗಬಸವ ಗ್ರಾಮದ ಹಿರಿಯರು ಮುಖಂಡರು ಗ್ರಾಮಸ್ಥರು ಗ್ರಾಮ ಪಂಚಾಯತಿ ಅಧ್ಯಕ್ಷೆ ಉಪಾಧ್ಯಕ್ಷರಿಗೆ ಸದಸ್ಯರಿಗೆ ಪಿಡಿಓ ಅವರಿಗೆ ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು
ವರದಿ:- ದುಂಡಪ್ಪ ಹೂಲಿ