ಬೈಲಹೊಂಗಲ:-ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ ಜಯಂತಿ ಆಚರಿಸಲಾಯಿತು. ದೇಶ ಕಂಡ ಇಬ್ಬರು ಅಪ್ರತಿಮ ಮಹಾನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲಾ ಆವರಣ ಸ್ವಚ್ಛ ಮಾಡುವುದರ ಮೂಲಕ ಶ್ರಮದಾನ ಮಾಡಿದರು.
ಮುಖ್ಯಶಿಕ್ಷಕರಾದ ಎನ್. ಆರ್. ಠಕ್ಕಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಸತ್ಯ, ಅಹಿಂಸೆ, ಸಜ್ಜನಿಕೆ, ಸ್ವಚ್ಛತೆ, ಪ್ರಾಮಾಣಿಕತೆ, ದಿಟ್ಟತನ, ದಕ್ಷತೆ, ದೇಶಾಭಿಮಾನ ಮುಂತಾದ ಮೌಲ್ಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಆದರ್ಶಗಳಿಂದ ಕೂಡಿದ ಸರಳ ಜೀವನ ಅತ್ಯಂತ ಶ್ರೇಷ್ಠ ಜೀವನ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ವೀರೇಂದ್ರ ಪಾಟೀಲ, ರೇಖಾ ಸೊರಟೂರ, ಹೇಮಲತಾ ಪುರಾಣಿಕ, ಸುಮಂಗಲಾ ಹತ್ತರಕಿ, ಅಡುಗೆ ಸಿಬ್ಬಂದಿಗಳಾದ ಮಹಾದೇವಿ ಸೊಗಲದ, ಗಂಗವ್ವ ಅಳಗೋಡಿ ಹಾಗೂ ಗಂಗವ್ವ ಅಜ್ಜಪ್ಪನವರ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಗಜೇಂದ್ರ ಹಿರೇಮಠ, ಲಕ್ಷ್ಮೀ ನಾಗಣ್ಣವರ, ಸುಪ್ರಿಯಾ ಕುಲಕರ್ಣಿ, ಸೃಷ್ಠಿ ಹಿರೇಮಠ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜೀವನ, ಸಾಧನೆ ಹಾಗೂ ತತ್ವ ಸಂದೇಶಗಳನ್ನು ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳನ್ನು ಹಾಡಿದರು. ಸೀಮಾ ಹೊಸೂರ ಪ್ರಾರ್ಥಿಸಿದರು. ಪೂಜಾ ಸೊಗಲದ ಸ್ವಾಗತಿಸಿದರು. ನಿರ್ಮಲಾ ಸೊಗಲದ ನಿರೂಪಿಸಿದರು. ಮಲ್ಲಮ್ಮ ಅಳಗೋಡಿ ವಂದಿಸಿದರು.
ವರದಿ ದುಂಡಪ್ಪ ಹೂಲಿ