ಮುದಗಲ್ಲ: -ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜನ್ಮದಿನಾಚರಣೆಯನ್ನು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ಸರಳವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಸಚ್ಚಿದಾನಂದ ಮಾತನಾಡಿ,
ಗಾಂಧೀಜಿಯವರ ಸ್ವಾವಲಂಬಿ ಜೀವನ ಇಂದಿನ ವಿದ್ಯಾರ್ಥಿಗಳಿಗೆ ಆದರ್ಶ ವಾಗಬೇಕು.
ಕಷ್ಟಪಟ್ಟು, ಇಷ್ಟಪಟ್ಟು ಓದಬೇಕು. ಯಾರೂ ಒತ್ತಡ ಹಾಕಿ ಓದಿಸಬಾರದು. ಸ್ವಾಲಂಬಿಯಾಗಿದ್ದಲ್ಲಿ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಪ್ರಾಮಾಣಿಕತೆ ಯ ಜೀವನವನ್ನು ವಿದ್ಯಾರ್ಥಿ ಗಳಿಗೆ ಅರ್ಥಪೂರ್ಣವಾಗಿ ವಿವರಿಸಿದರು.
ದೇಶದ ಸೈನಿಕರು ಮತ್ತು ರೈತರಿಗೆ ಸಮಾನವಾದ ಗೌರವವನ್ನು ಶಾಸ್ತ್ರಿಯವರು ನೀಡಿದರು ಎಂಬುದನ್ನು ನೆನಪಿಸಿದರು. ಅವರು ಪ್ರಧಾನಿಯಾಗಿದ್ದ ದೇಶವು ಪ್ರಗತಿಯತ್ತ ಮುನ್ನಡೆಯುವಂತೆ ಅವರು ಮಾಡಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಸಚ್ಚಿದಾನಂದ ,ರಾಜುಮುಖಿ,ಚಿನ್ನಪ್ಪ ,ಚನ್ನಬಸವ ಕುಂಬಾರ ಹಾಗೂ ಮುದ್ದು ವಿಧ್ಯಾರ್ಥಿ ಗಳು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ