Join The Telegram | Join The WhatsApp |
ಹಾರೂಗೇರಿ: ಸದಾಶಿವ ಆಯೋಗದ ವರದಿಯಂತೆ ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ನೀಡುವುದರಿಂದ ಸಮಾಜದ ಏಳಿಗೆಗೆ ಸಹಕಾರಿಯಾಗುತ್ತದೆ ಎಂದು ಉದ್ಯಮಿ, ಭಾರತ ವೈಭವ ದಿನ ಪತ್ರಿಕೆ ಸಂಪಾದಕರು ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟಗ ಗೌರವಾಧ್ಯಕ್ಷರಾದ ಡಾ.ಎನ್ ಪ್ರಶಾಂತ ರಾವ್ ಐಹೊಳೆ ತಿಳಿಸಿದರು.
ಹಾರೂಗೇರಿ ಪಟ್ಟಣದಲ್ಲಿ ನಡೆದ ಮಾದಿಗ ಸಮಾಜದ ಒಳ ಮೀಸಲಾತಿ ಹೋರಾಟದ ಬೈಕ್ ಜಾತಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಿಗ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ತುಂಬಾ ಹಿಂದುಳಿದಿದೆ, ಸದಾಶಿವ ಆಯೋಗದ ವರದಿಯಂತೆ ಮಾದಿಗ ಸಮಾಜದ ಏಳಿಗೆಗೆ ಒಳ ಮೀಸಲಾತಿ ಸಿಗಬೇಕು. ಇದೆ ಡಿಸೆಂಬರ್21 ರಂದು ಚಳಿಗಾಲ ಅಧಿವೇಶನದ ವೇಳೆ ಸುವರ್ಣಸೌದದ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಸಮಾಜದ ಯುವಕರೆಲ್ಲರು ಸಹಕರಿಸಬೇಕು. 1997 ರಿಂದ ಈ ಹೋರಾಟ ಪ್ರಾರಂಭವಾಗಿದೆ ಪ್ರಸ್ತುತ ಈ ಹೋರಾಟ ಯಶಸ್ವಿ ಹಂತ ಸಮೀಪಿಸಿದ್ದು ಇದೆ ತಿಂಗಳು ನಡೆಯಲಿರುವ ಚಳಿಗಾಲ ಅದಿವೇಶನದಲ್ಲಿ ಹೋರಾಟದ ಪ್ರತಿಫಲ ಸಿಗುವ ಭರವಸೆ ಇದೆ. ಅಧಿವೇಶದಲ್ಲಿ ಮೀಸಲಾತಿ ಚರ್ಚೆಯಾಗಿ ಸಿಪಾರಸ್ಸಿಗಾಗಿ ಕೆಂದ್ರ ಸರ್ಕಾರ ತಲುಪಿದರೆ ಮೀಸಲಾತಿ ದೋರೆಯುವ ಸಾಧ್ಯತೆ ಇದೆ. ಮೀಸಲಾತಿ ಸಿಗದೆ ಹೋದಲ್ಲಿ ಮುಂದೆ ಉಗ್ರ ಹೋರಾಟ ಮಾಡುತ್ತೆವೆ ಎಂದು ತಿಳಿಸಿದರು.
ಈ ಮೀಸಲಾತಿ ಬೈಕ್ ಜಾತಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ ಬೆಂಗಳೂರು ಮಾದಿಗ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷರಾದ ಡಾ ಪ್ರಶಾಂತರಾವ್ ಐಹೊಳೆ , ಅಧ್ಯಕ್ಷ ಮುತ್ತಣ್ಣ ಬೆಣ್ಣೂರ, ಕಾರ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ರಾಜೇಂದ್ರ ಐಹಳೆ, ಅಜಿತ ಮಾದರ, ರಂಗನಾಥ ಶಿರಾ, ಮಾರುತಿ ಕೆಳಗೇರಿ, ಕುಮಾರ ಹಲಕಲ್, ಮತ್ತು ಹಾರೂಗೇರಿಯ ಮಾದಿಗ ಸಮಾಜ ಗುರು ಹಿರಿಯರು ಉಪಸ್ಥಿತರಿದ್ದರು.
ವರದಿ : ಪ್ರತೀಕ್ ಕಮ್ಮಾರ್
Join The Telegram | Join The WhatsApp |