ಕಲಘಟಗಿ: ಪಟ್ಟಣದ ಗುಡ್ ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕುಂದಗೋಳ ತಾಲೂಕಿನಲ್ಲಿ ದಲ್ಲಿ ಜರಗಿದ ಧಾರವಾಡ ಜಿಲ್ಲಾ ಮಟ್ಟದ ಬಾಲಕಿಯರ ಖೋ ಖೋ ಪಂದ್ಯಾವಳಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ. ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ರೇ ಬ್ರ. ವರ್ಗಿಸ್ ಕೆಜೆ ರವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ನವೀನ ರೆಡ್ಡರೆ ದೈಹಿಕ ಉಪನ್ಯಾಸಕರಾದ ರಾಮು ಲಮಾಣಿ ತಂಡದ ಮ್ಯಾನೇಜರ್ ಜಾಫರ್ ಭಾವನವರ್ ಹಾಗೂ ಕಾಲೇಜಿನ ಎಲ್ಲ ಉಪನ್ಯಾಸಕರು ಹಾಗೂ ಬೋಧಕೇತರ ವರ್ಗದವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಅಭಿನಂದಿಸಿದರು.
ವರದಿ:ವಿನಾಯಕ ಎನ್ ಗುಡ್ಡದಕೇರಿ