Join The Telegram | Join The WhatsApp |
ಗುಳೆದಗುಡ್ಡ ಸೆ.೧೬- ಇಂದಿನ ರಾಜ್ಯ ಸರ್ಕಾರ ವಿದ್ಯುತ್ ಚಾಲಿತ ನೇಕಾರರಿಗೆ ೧೦ಎಚ್‌ಪಿ ವರೆಗೆ ಉಚಿತ ವಿದ್ಯುತ್ ನೀಡಿದ್ದು, ಅದರ ಜೊತೆ ಉಳಿದ ೧೦ಎಚ್‌ಪಿವರೆಗೆ ಒಂದು ಯೂನಿಟ್‌ಗೆ ರೂ.೧.೨೫ಪೈಸೆದಂತೆ ನಿಗಧಿಗೊಳಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಹೇಳಿಕೆ ನೀಡಿದ್ದು ಸ್ವಾಗತಾರ್ಹ ಎಂದು ಕೆಎಚ್‌ಡಿಸಿ ಮಾಜಿ ಅಧ್ಯಕ್ಷ, ನೇಕಾರ ಮುಖಂಡ ರವೀಂದ್ರ ಕಲಬುರ್ಗಿ ಹೇಳಿದ್ದಾರೆ.
ಈ ಕುರಿತು ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಈ ಮೊದಲು ನೇಕಾರರಿಗೆ ಇರತಕ್ಕಂತ ಒಂದು ಯೂನಿಟ್‌ಗೆ ರೂ ೧.೨೫ಪೈಸೆ ಇದ್ದದ್ದನ್ನು ರದ್ದುಗೊಳಿಸಿ, ಅದನ್ನು ರೂ.೪.೨೫ಪೈಸೆಗೆ ಹೆಚ್ಚಳ ಮಾಡಿ ಮತ್ತು ಅದಕ್ಕೆ ಎಫ್‌ಸಿಎ ಹಾಗೂ ಮಿನಿಮಮ್ ಚಾರ್ಜ್ ಸೇರಿ ಒಂದು ಯೂನಿಟ್‌ಗೆ ರೂ.೬.೫೦ಪೈಸೆಗೆ ಹೆಚ್ಚಿಸಿತ್ತು. ಇದರಿಂದ ಮೂರು ತಿಂಗಳಿನಿAದ ನಿಂತಿರುವ ಈ ಹೆಚ್ಚಳ ಬಿಲ್‌ನ್ನು ಸಂಪೂರ್ಣ ರದ್ದುಪಡಿಸಬೇಕೆಂದು ಮುಖಂಡ ರವೀಂದ್ರ ಕಲಬುರ್ಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ವಿದ್ಯಾ ವಿಕಾಸ ಯೋಜನೆಯಡಿ ಶಾಲಾ ಮಕ್ಕಳ ಸಮವಸ್ತçಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳಪೆ ಮಟ್ಟದ ಬಟ್ಟೆಗಳನ್ನು ಬೇರೆ ಗುತ್ತಿಗೆದಾರರಿಂದ ಖರೀದಿ ಮಾಡಿ ಕೊಟ್ದಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಮುಖಂಡ ರವೀಂದ್ರ ಕಲಬುರ್ಗಿ ಅವರು, ಈ ಅವ್ಯವಹಾರದ ವಿಷಯದಲ್ಲಿ ನೇಕಾರ ಬಾಂಧವರದ್ದು ಯಾವುದೇ ತಪ್ಪಿಲ್ಲ ಎಂದು ಪರಿಗಣಿಸಿ, ಅಂದಿನ ಅಧಿಕಾರ ವರ್ಗದವರಾಗಲಿ, ವ್ಯವಸ್ಥಾಪಕ ನಿರ್ದೇಶಕರಾಗಲಿ, ಅಂದಿನ ಅವಧಿಯಲ್ಲಿನ ಅಧ್ಯಕ್ಷರಾಗಲಿ ಇದಕ್ಕೆ ಯಾರು ಕಾರಣಿಕರ್ತರಾಗಿದ್ದಾರೆ
ಅವರನ್ನು ತನಿಖೆಗೊಳಪಡಿಸಿ ಅವರಿಗೆ ಯೋಗ್ಯ ಶಿಕ್ಷೆಯನ್ನು ಕೊಡಬೇಕು. ಈಗಾಗಲೇ ಸರ್ಕಾರ ಪ್ರಸ್ತುತ ಕೈಮಗ್ಗ ಅಭಿವೃದ್ಧಿ ನಿಗಮದ ಎಂಡಿ ಅವರನ್ನು ಅಮಾನತ್ ಮಾಡಿದ್ದು, ಕ್ಯಾಬಿನೆಟ್‌ನಲ್ಲಿ ಸರ್ಕಾರ ಈಗಾಗಲೇ ನಿರ್ಧರಿಸಿದ್ದಂತೆ ಇದರಲ್ಲಿ ಅಂದಿನ ಅವಧಿಯ ಅಧ್ಯಕ್ಷರು ಸೇರಿದಂತೆ ಯಾರೇ ತಪ್ಪಿತಸ್ಥರಿರಲಿ ಅವರ ಮೇಲೆ ಸೂಕ್ತ ತನಿಖೆಗೆ ಅದೇಶಿಸುವ ಮೂಲಕ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಪುನಃ ಬದುಕಿಸುವ ಕಾರ್ಯಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದ ಕ್ರಮವನ್ನು ರವೀಂದ್ರ ಕಲಬುರ್ಗಿ ಸ್ವಾಗತಿಸಿದ್ದಾರೆ
ಕೆಎಚ್‌ಡಿಸಿ ನೇಕಾರರಿಗೆ ಕಚ್ಚಾಮಾಲು ಮತ್ತು ಮಜೂರಿಯನ್ನು ಕೊಡದಿರುವುದು ಬಹಳ ನೋವಿನ ಸಂಗತಿಯಾಗಿದ್ದು, ಸರ್ಕಾರ ಇದನ್ನು ನಿಲ್ಲಿಸದೇ ಕೂಡಲೇ ಕೆಎಚ್‌ಡಿಸಿ ನೇಕಾರರಿಗೆ ಕಚ್ಚಾಮಾಲು ಮತ್ತು ಮಜೂರಿಯನ್ನು ಕೊಡಬೇಕೆಂದು ಮನವಿ ಮಾಡಿದ್ದಾರೆ, ಅಲ್ಲದೇ ಈಗಾಗಲೇ ರೈತರು ಕೃಷಿಗೆ ಉಪಯೋಗಿಸುವ ಪಂಪಸೆಟ್, ಪೈಪ್‌ಲೈನ್ ಡ್ರಿಪ್‌ಗಾಗಿ ಶೇ೯೦ರಷ್ಟು ಸಬ್ಸಿಡಿ ಮತ್ತು ಎಸ್‌ಸಿ, ಎಸ್‌ಟಿ ಜನಾಂಗ ಮಾಲುಗಳಿಗೆ ಶ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇಕಾರರಿಗೆ ರಾಜಕೀಯ ಶಕ್ತಿ ತುಂಬಿದ್ದು ನಾವು ಮರೆತಿಲ್ಲ. ಕಳೆದ ೨೦೧೩ರಲ್ಲಿ ನೇಕಾರರ ನಿಗಮಗಳನ್ನು ನೇಕಾರರ ಪ್ರತಿನಿಧಿಗಳನ್ನೇ ನೇಮಿಸಿದ್ದು ಸ್ವಾಗತಾರ್ಹ ಮತ್ತು ನೇಕಾರ ಕುಟುಂಬದ ಉಮಾಶ್ರೀ ಅವರಿಗೆ ಪಸಕ್ತ ಸಾಲಿನಲ್ಲಿ ಸರ್ಕಾರ ಎಂಎಲ್‌ಸಿ ಮಾಡಿದ್ದು ಅಭಿನಂದನೀಯ.
ಆ ನಿಟ್ಟಿನಲ್ಲಿ ನೇಕಾರರ ಶಕ್ತಿಯನ್ನು ಇನ್ನಷ್ಟು ಬಲಪಡಿಸಿ ಅದನ್ನು ಗಟ್ಟಿಗೊಳಿಸಲು ಕೈಮಗ್ಗ ಅಭಿವೃದ್ದಿ ನಿಗಮ, ಪಾವರಲೂಮ್ ನಿಗಮ, ಕಾವೇರಿ ಹ್ಯಾಂಡಲೂಮ್ ನಿಗಮ, ಸಿಲ್ಕ್ಬೋರ್ಡ, ಖಾದಿಬೋರ್ಡ ಸೇರಿದಂತೆ ಇನ್ನಿತರ ನೇಕಾರರ ನಿಗಮಗಳಿಗೆ ನೇಕಾರಿಕೆಯ ಅನುಭವ ಇರುವ ನೇಕಾರರ ಜನಾಂಗಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಕೆಎಚ್‌ಡಿಸಿ ಮಾಜಿ ಅಧ್ಯಕ್ಷ, ಮುಖಂಡ ರವೀಂದ್ರ ಕಲಬುರ್ಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವರದಿ: ಮಹಾಲಿಂಗೇಶ ಯಂಡಿಗೇರಿ
Join The Telegram | Join The WhatsApp |