Join The Telegram | Join The WhatsApp |
ಸೇಡಂ: ತಾಲೂಕಿನ ಮುಧೋಳ್ ವಲಯಕ್ಕೆ ಸಂಬಂಧಪಟ್ಟ ಲಿಂಗಂಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಣಮಂತ ರೆಡ್ಡಿ ಬೊಂದೆಂಪಲ್ಲಿ ಇವರು ಗ್ರಾಮ ಪಂಚಾಯಿತಿಗೆ ಒಳಪಡುವ ಗುಂಡೆಪಲ್ಲಿ ಕೆ, ಕದಲಾಪುರ, ಬನ್ನೂರು ಜಿ, ಹಾಗೂ ಲಿಂಗಂಪಲ್ಲಿ ಸರ್ಕಾರಿ ಶಾಲೆಗಳಿಗೆ ಹಾಗೂ ಅಂಗನವಾಡಿ ಶಾಲೆಗಳಿಗೆ ಬೇಟಿ ನೀಡಿ ಅಲ್ಲಿನ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು.
ಮುಂದಿನ ದಿನಗಳಲ್ಲಿ ಶಾಲಾಭಿವೃದ್ಧಿಗೆ ಬೇಕಾಗುವ ಸಹಾಯ ಗ್ರಾಮ ಪಂಚಾಯಿತಿ ವತಿಯಿಂದ ನೀಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹಣಮಂತ ರೆಡ್ಡಿ ಬೊಂದೆಂಪಲ್ಲಿ, ಗ್ರಾಮ ಪಂಚಾಯಿತಿ ಸದಸ್ಯರಾದ ಬಸಪ್ಪ ಲಿಂಗಂಪಲ್ಲಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್
Join The Telegram | Join The WhatsApp |