ಮೊಳಕಾಲ್ಮೂರು:- ತಾಲೂಕಿನ ಕೋನಸಾಗರ ಗ್ರಾಮದ ಶ್ರೀ ವಿಶಾಲಾಕ್ಷಿ ಗ್ರಾಮಾಂತರ ಪ್ರೌಢಶಾಲೆ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋನಸಾಗರ ಇವರ ಸಹಯೋಗದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ನವೆಂಬರ್ 5 ಭಾನುವಾರದಂದು ಕೋನಸಾಗರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಛಾಯಾಗ್ರಾಹಕ ಸಂಘದ ಅಧ್ಯಕ್ಷರು ಟಿ ರುದ್ರೇಶ್ ಮಾಧ್ಯಮಕ್ಕೆ ಮಾಹಿತಿ ತಿಳಿಸಿದರು.
ಈ ಸಂದರ್ಭದಲ್ಲಿ ಈ ಶಾಲೆಯ ಹಳೆ ವಿದ್ಯಾರ್ಥಿ ಮತ್ತು ಶಿಕ್ಷಕರಾದ ಮೋಹನ್ ರವರು ಮಾತನಾಡಿ ತಾಲ್ಲುಕಿನ ಕೋನಸಾಗರ ಗ್ರಾಮದಲ್ಲಿ 5.11.2023ನೇ ಭಾನುವಾರ ಬೆಳಿಗ್ಗೆ 9:00ಗಂಟೆಗೆ ಶ್ರೀ ವಿಶಾಲಾಕ್ಷಿ ಗ್ರಾಮಾಂತರ ಪ್ರೌಢಶಾಲೆ ಕೋನಸಾಗರ ಗ್ರಾಮದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು 9:00ಗೆ ಮೆರವಣಿಗೆ ಮುಖಾಂತರ ಪ್ರಾರಂಭ ಮಾಡಿ ಹಳೆ ವಿದ್ಯಾರ್ಥಿಗಳ ನಿವೃತ್ತ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಅನೇಕರನ್ನು ಸನ್ಮಾನಿಸಿ ಮೆರವಣಿಗೆ ನಡೆಸಲಾಗುತ್ತದೆ. ಮಧ್ಯಾಹ್ನ 12 ಗಂಟೆಯಿಂದ 2:30ಮದ್ಯಾಹ್ನ ತನಕ ಭೋಜನದ ವ್ಯವಸ್ಥೆಯನ್ನು ಎಲ್ಲರಿಗೂ ಮಾಡಲಾಗಿದೆ.
ಮಧ್ಯಾಹ್ನ 2:00ರಿಂದ ಸಂಜೆ 6:00ಗಂಟೆ ತನಕ ವೇದಿಕೆ ಕಾರ್ಯಕ್ರಮವನ್ನು ನಡೆಸಿಕೊಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಅನೇಕ ಗುರು ಹಿರಿಯ ಸಾಧಕರಿಗೆ ಸನ್ಮಾನಿಸಿ ಅವರ ಅನಿಸಿಕೆಗಳನ್ನು ವ್ಯಕ್ತಪಡಿಸಲಾಗುತ್ತದೆ. ಸಂಜೆ 7:00ಗೆ ಜೂನಿಯರ್ ವಿಷ್ಣುವರ್ಧನ್ ಹಾಗೂ ಜೂನಿಯರ್ ರವಿಚಂದ್ರನ್ ಒಳಗೊಂಡ ರಸಮಂಜರಿ ತಂಡದೊಂದಿಗೆ ಬಿಜಿಕೆರೆ ಉಪ್ಪಿ ಮೆಲೋಡಿಸ್ ಆರ್ಕೆಸ್ಟ್ರಾ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮತ್ತು ಸುತ್ತಮುತ್ತಲಿನ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ :-ಪಿಎಂ ಗಂಗಾಧರ