Ad imageAd image

ಆ.5 ರಂದು ನಡೆಯುವ ಸ್ವಾಭಿಮಾನ ಬೃಹತ್ ಸಮಾವೇಶಕ್ಕೆ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ: ಹಂಪಯ್ಯನಾಯಕ

Bharath Vaibhav
ಆ.5 ರಂದು ನಡೆಯುವ ಸ್ವಾಭಿಮಾನ ಬೃಹತ್ ಸಮಾವೇಶಕ್ಕೆ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ: ಹಂಪಯ್ಯನಾಯಕ
WhatsApp Group Join Now
Telegram Group Join Now

ಮಾನ್ವಿ: -ಪಟ್ಟಣದ ರಾಯಚೂರು ರಸ್ತೆಯಲ್ಲಿನ ಬಯಲು ಜಾಗದಲ್ಲಿ ಕಾಂಗ್ರೇಸ್ ಪಕ್ಷದಿಂದ ನಡೆಯುವ ಸ್ವಾಭಿಮಾನ ಬೃಹತ್ ಸಮಾವೇಶ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಶಾಸಕ ಹಂಪಯ್ಯನಾಯಕ ಪಕ್ಷದ ಹಿರಿಯ ಮುಖಂಡರೊAದಿಗೆ ಸ್ಥಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ.5 ರಂದು ಬೆ.11 ಕ್ಕೆ ಪಟ್ಟಣಕ್ಕೆ ಆಗಮಿಸಲಿದ್ದಾರೆ .

ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳನ್ನು ನೀಡಿದ್ದಾರೆ ಹಾಗೂ ತಾಲೂಕಿಗೆ ಹೆಚ್ಚಿನ ಅನುದಾನವನ್ನು ನೀಡಿದ್ದಾರೆ. ಕಲ್ಮಲದಿಂದ ಸಿಂಧನೂರು 16ನೂರು ಕೋಟಿ ವೆಚ್ಚದಲ್ಲಿ ಚತುಷ್ಪದ ರಸ್ತೆ, ಚೀಕಲಪರ್ವಿ ತುಂಗಭದ್ರ ನದಿಗೆ ಬ್ರೀಜ್ ಕಂ ಬ್ಯಾರೆಜ್,ಚಿಕ್ಕಮಂಚಾಲಿ ಯೋಜನೆ, ಮಿನಿ ವಿಧಾನಸೌಧ,ಮಾನ್ವಿ ಮತ್ತು ಸಿರವಾರ ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಚಾಲನೆ ನೀಡಲಿದ್ದಾರೆ.

ರಾಜ್ಯದ ಅನೇಕ ಸಚಿವರು ಕೂಡ ಆಗಮಿಸಲಿದ್ದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು, ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳ್ಳಿ, ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ. ಮಹಾದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿ,ರಹೀಮ್‌ಖಾನ್, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಸೇರಿದಂತೆ ಇನ್ನಿತರ ಸಚಿವರು,ಶಾಸಕರು,ವಿಧಾನ ಪರಿಷತ್ ಸದಸ್ಯರು,ಸಂಸದರು, ಹಾಗೂ ಪಕ್ಷದ ಹಿರಿಯ ಮುಖಂಡರು.

ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪಟ್ಟಣಕ್ಕೆ ಭವ್ಯವಾಗಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು. ರಾಜ್ಯದ ಮುಖ್ಯಮಂತ್ರಿಗಳು ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಲಿರುವುದರಿಂದ ಮಾನ್ವಿ ಮತ್ತು ಸಿರವಾರ ತಾಲೂಕಿನಿಂದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಬೆಂಬಲ ನೀಡಬೇಕು ಎಂದು ಕೋರಿದರು.

ರಾಜ್ಯ ಕಾಂಗ್ರೇಸ್ ಪಕ್ಷದ ಯುವ ಮುಖಂಡರಾದ ರವಿ ಬೋಸರಾಜು ಮಾತನಾಡಿ ರಾಜ್ಯದಲ್ಲಿ ಹಿಂದೂಳಿದ ವರ್ಗದ ರಕ್ಷಕ,ದೇಶದಲ್ಲಿ ಮಾದರಿಯಾದ ಸರಕಾರವನ್ನು ನೀಡಿದ,ಉತ್ತಮ ಜನಪರವಾದ ಆಡಳಿತ ನಡೆಸುತ್ತಿರುವ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಮೇಲೆ ಸುಳ್ಳು ಅಪಾದನೆಯನ್ನು ಮಾಡಲಾಗುತ್ತಿದೆ ರಾಜ್ಯದ ಬಿ.ಪಿ.ಎಲ್ .ಕುಟುಂಬಗಳಿಗೆ ಅನೇಕ ಯೋಜನೆಗಳನ್ನು ನೀಡಿದ ಧೀಮಂತ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಂಕಷ್ಟಕ್ಕೆ ಒಳಪಡಿಸಲಾಗುತ್ತಿದ್ದು ,

ಅವರಿಗೆ ಕಾಂಗ್ರೇಸ್ ಪಕ್ಷ ಯಾವತ್ತು ಬೆಂಬಲವಾಗಿ ನಿಲ್ಲುತ್ತದೆ ತಾಲೂಕಿನ ಜನರು ಕೂಡ ಧೈರ್ಯವನ್ನು ತುಂಬುವುದಕ್ಕೆ ಹಾಗೂ ಕಾಂಗ್ರೇಸ್ ನೇತೃತ್ವದಲ್ಲಿನ ರಾಜ್ಯ ಸರಕಾರವನ್ನು ವಿರೋಧ ಪಕ್ಷಗಳು ಅಸ್ಥಿರಗೊಳ್ಳಿಸುವುದಕ್ಕೆ ನೋಡುತ್ತಿರುವುದನ್ನು ಖಂಡಿಸಿ ಬೆಂಬಲಿಸಬೇಕಾಗಿದೆ ಹಾಗೂ ನಾವೇಲ್ಲರು ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಲ್ಲಬೇಕಾಗಿರುವುದರಿಂದ ಪಟ್ಟಣದಲ್ಲಿ ನಡೆಯುವ ಸ್ವಾಭಿಮಾನ ಬೃಹತ್ ಸಮಾವೇಶ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅಬ್ದುಲ್ ಗಾಫೂರ್ ಸಾಬ್, ರಾಜಾ ಸುಭಾಷನಾಯಕ,ಕೆ.ಬಸವಂತಪ್ಪ, ಸಾಲಿಂಪಾಷಾ,ಸೇರಿದAತೆ ಹಿರಿಯ ಮುಖಂಡರು ಇದ್ದರು.

ಮಾನ್ವಿ: ಪಟ್ಟಣದ ರಾಯಚೂರು ರಸ್ತೆಯಲ್ಲಿನ ಬಯಲು ಜಾಗದಲ್ಲಿ ಕಾಂಗ್ರೇಸ್ ಪಕ್ಷದಿಂದ ನಡೆಯುವ ಸ್ವಾಭಿಮಾನ ಬೃಹತ್ ಸಮಾವೇಶ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಶಾಸಕ ಹಂಪಯ್ಯನಾಯಕರಿAದ ಸ್ಥಳ ಪರಿಶೀಲನೆ

ವರದಿ:-ಶಿವತೇಜ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!