Join The Telegram | Join The WhatsApp |
ಮೂಡಲಗಿ: ರಾಜಸ್ಥಾನದ ಉದಯಪೂರದಲ್ಲಿ ಡಿ. ೨೫ ರಿಂದ ಜರುಗಲಿರುವ ಅಂಗವಿಕಲರ ರಾಷ್ಟ್ರೀಯ ವಿಲ್‌ಚೇರ್ ಕ್ರಿಕೇಟ್ ಟೋರ್ನಾಮೆಂಟಗೆ ತಾಲೂಕಿನ ಗುಲಗಂಜಿಕೊಪ್ಪದ ಹನಮಂತ ಹಾವಣ್ಣವರ ಕರ್ನಾಟಕ ತಂಡದಲ್ಲಿ ಪ್ರತಿನಿಧಿಸುವ ಮೂಲಕ ಗ್ರಾಮೀಣ ಮಟ್ಟದಲ್ಲಿದ್ದರು ವಿಶೇಷ ಕ್ರೀಡಾ ಪ್ರತಿಭೆಗೆ ಅವಕಾಶ ಸಿಕ್ಕಂತಾಗಿದೆ.
ಮೂಲತಃ ಕೃಷಿ ಕುಟುಂಬದಿoದ ಬಂದoತಹ ಹನಮಂತ ಹಾವಣ್ಣವರ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಹೊಂದಿರುವದರಿoದ ಅಂಗವಿಕಲನಾದರು ಛಲಬಿಡದೆ ಪ್ರಯತ್ನ ಪಟ್ಟು ಕರ್ನಾಟಕ ತಂಡದಲ್ಲಿ ಪ್ರತಿನಿಧಿಸುವದು ಹೆಮ್ಮೆಯ ವಿಷಯವಾಗಿದೆ. ಪ್ರಸ್ತುತ ಗ್ರಾಮ ಪಂಚಾಯತ ಸದಸ್ಯರಾಗಿದ್ದು ಅನೇಕ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅರಭಾಂವಿ ಶಾಸಕ ಹಾಗೂ ಕೆ.ಎಮ್.ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿಯವರು ಕ್ರೀಡಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Join The Telegram | Join The WhatsApp |