Join The Telegram | Join The WhatsApp |
ಬೆಳಗಾವಿ : ತಿಂಗಳ ಎರಡನೇ ಶನಿವಾರವಾದ ಇಂದು ನಗರದ ಪೊಲೀಸ್ ಭವನದಲ್ಲಿ ಎಂದಿನಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಸಂಜೀವ ಪಾಟೀಲ್ ಅವರು ಸಾರ್ವಜನಿಕರೊಂದಿಗಿನ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು..
ಕಳೆದ ಕೆಲವು ತಿಂಗಳಿನಿಂದ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಜನರಿಂದ ತುಂಬಾ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಪ್ರತಿ ಎರಡನೇ ಹಾಗೂ ನಾಲ್ಕನೇ ಶನಿವಾರದಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಈ ಫೋನ್ ಇನ್ ಕಾರ್ಯಕ್ರಮ ನಡೆಯುತ್ತದೆ..
ಈ ವೇಳೆ ಜಿಲ್ಲೆಯಾದ್ಯಂತ ಹಲವಾರು ಸಾರ್ವಜನಿಕರು ತಮ್ಮ ವಿವಿಧ ಸಮಸ್ಯಗಳನ್ನು ಹೇಳಿಕೊಂಡು ಕರೆಗಳ ಮೇಲೆ ಕರೆಗಳನ್ನು ಮಾಡುತ್ತ ತಮ್ಮ ಸಮಸ್ಯ ಹೇಳಿಕೊಂಡರು..
ಎಸ್ ಪಿ ಅವರು ಪ್ರತಿಯೊಬ್ಬರ ಜೊತೆ ಸಮಾಧಾನವಾಗಿ ಸ್ಪಂದನೆ ನೀಡಿ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆದು, ಅಲ್ಲಿಯೇ ಅವರ ಸಮಸ್ಯ ಕುರಿತು ಪರಿಹಾರದ ಬಗ್ಗೆ ಮಾತನಾಡಿ, ತಮ್ಮ ಸಿಬ್ಬಂದಿಗಳಿಗೆ ಸಮಸ್ಯ ಬಗ್ಗೆ ಕಾರ್ಯಪ್ರವರ್ತರಾಗುವಂತೆ ಸೂಚಿಸುತ್ತಾ, ನಮ್ಮ ಸಿಬ್ಬಂದಿಗಳು ತಮಗೆ ಕರೆ ಮಾಡಿ, ಹೆಚ್ಚಿನ ಮಾಹಿತಿ ಪಡೆದು ತಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ಪ್ರತಿಯೊಬ್ಬರ ಕರೆಗೆ ಅರ್ಥಪೂರ್ಣವಾದ ಸ್ಪಂದನೆ ನೀಡಿದರು…
ಸಮಾಜದ ಎಲ್ಲ ಕ್ಷೇತ್ರದ ಜನರೂ ತಮ್ಮ ಸಮಸ್ಯೆಗಳನ್ನು ಎಸ್ ಪಿ ಅವರೊಂದಿಗೆ ಹೇಳಿಕೊಂಡಿದ್ದು, ವೈಯಕ್ತಿಕ ವಿಚಾರ, ರೈತರ ಸಮಸ್ಯ, ನ್ಯಾಯಬೆಲೆಯ ಅಕ್ಕಿಯ ಕಳ್ಳಸಾಕಾಣಿಕೆ, ಹಣದ ಲೇವಾದೇವಿ ವಿಷಯವಾಗಿ, ಕಳ್ಳತನ, ಪೊಲೀಸ್ ಠಾಣೆಯ ಸಮಸ್ಯ, ಔದ್ಯೋಗಿಕ ವಲಯದ, ವೃತ್ತಿಪರ, ನಕಲಿ ಪತ್ರಕರ್ತರ ಸಮಸ್ಯ, ಬೆಳಗಾವಿ ನಗರಕ್ಕೂ ಸಂಭಂದಿಸಿದಂತೆ, ಹೀಗೆ ಬಹುತೇಕ ವಿಷಯಗಳಿಗೆ ಸಂಭಂಧಿಸಿದ, ಕನ್ನಡ, ಹಿಂದಿ, ಭಾಷೆಯಲ್ಲಿ ಹಲವಾರು ಜನರು ತಮ್ಮ ತಮ್ಮ ಸಮಸ್ಯೆಗಳ ಕುರಿತು ಕರೆ ಮಾಡಿ ಹೇಳಿಕೊಂಡರು..
ಜನೆವರಿ 14ರಂದು ಸಂಕ್ರಾಂತಿ ಹಬ್ಬ ಇದ್ದರೂ ಕೂಡ, ಸಾರ್ವಜನಿಕರ ಕರೆಗಳಿಗೆ ಕೊರತೆ ಇರಲಿಲ್ಲ,, ವೃದ್ಧರು, ಯುವಕರು, ಮಹಿಳೆಯರು, ಬಹುತೇಕ ಎಲ್ಲ ವಯೋಮಿತಿಯ ಎಲ್ಲಾ ವರ್ಗದವರೂ, ತಮ್ಮ ಸಮಸ್ಯ ಕುರಿತು ಕರೆ ಮಾಡಿ ಮಾತನಾಡಿದರು, ಎಸ್ ಪಿ ಅವರು ಎಲ್ಲರೊಂದಿಗೆ, ಅವರ ಸಮಸ್ಯ ಆಲಿಸುತ್ತಾ, ಆತ್ಮೀಯವಾಗಿ ಮಾತನಾಡಿ, ಚಹಾ ಉಪಹಾರ ಬಗ್ಗೆ ವಿಚಾರಿಸುತ್ತಾ ಉತ್ತಮ ಸ್ಪಂದನೆ ನೀಡಿದರು..
ಟ್ರಾಫಿಕ್ ಹಾಗೂ ನಗರಕ್ಕೆ ಸಂಭಂಧಿಸಿದ ದೂರು ಬಂದಲ್ಲಿ, ಸಂಭಂದಪಟ್ಟ ಅಧಿಕಾರಿಗಳಿಗೆ ತಿಳಿಸಿ ಸಮಸ್ಯ ಪರಿಹಾರ ಮಾಡಿಸುತ್ತೇವೆ ಎಂಬ ಭರವಸೆ ನೀಡಿದರು..
ಈ ಒಂದು ಸಾರ್ವಜನಿಕರ ಜೊತೆಗಿನ ಎಸ್ ಪಿ ಅವರ ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್ ಪಿ ಅವರೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆಯ ಹಲವಾರು ಸಿಬ್ಬಂದಿಗಳು ಭಾಗಿಯಾಗಿದ್ದರು..
ವರದಿ ಪ್ರಕಾಶ ಕುರಗುಂದ
Join The Telegram | Join The WhatsApp |