ಬೆಂಗಳೂರು : ನಿನ್ನೆ ವಿಪಕ್ಷ ನಾಯಕರ ಆಯ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಐಟಿಸಿ ಹೋಟೆಲ್ ನಲ್ಲಿ blp ಸಭೆ ನಡೆದಿದ್ದು ಸಭೆಗೂ ಮುನ್ನ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಭೆಯನ್ನು ಬಹಿಷ್ಕರಿಸಿ ಹೊರ ನಡೆಯುತ್ತಿದ್ದಾಗ ಚಹಾ ಕುಡಿದು ಬರುತ್ತೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಇದಕ್ಕೆ ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ ಅಂತ ಹೊರಗೆ ಟೀ ಕುಡಿಯಲು ಹೋದವರು ಜಗನ್ನಾಥ ಭವನದ ಎದುರು ಟೀ ಮಾರಿಕೊಂಡು ಕೂತಿದ್ದಾರಂತೆ, ಮೋದಿ ಮಾದರಿ ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?! “ಜಾರಿದವರ ಯತ್ನ ಬೆಲ್ಲ” ಆಗ್ಲಿಲ್ಲವಲ್ಲಪ್ಪ ಎಂದು ವ್ಯಂಗ್ಯವಾಡಿತ್ತು.
ಇದಕ್ಕೆ ಇದೀಗ ಬಸನಗೌಡ ಪಾಟೀಲ್ ಯತ್ನಾಳ ವೆಂಗ್ಯವಾಗಿ ತಿರುಗೇಟನ್ನು ನೀಡಿದ್ದು, ಹೇ ಪ್ರಭು ಚಹಾ ಮಾರಿಕೊಂಡು ಆದರೂ ಬದುಕಬಹುದು ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.