This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಬಿಜೆಪಿ ಭಾಗ್ಯದ ಬಾಗಿಲು ತೆರೆಯುತ್ತಿರುವ ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗೇಶ ಮನೊಲ್ಕರ: ಬೆಳಗಾವಿ ಸಾಹುಕಾರರ ಹೊಸ ಲೆಕ್ಕಾಚಾರ

Join The Telegram Join The WhatsApp

 

ಬೆಳಗಾವಿ ನಗರಕ್ಕೆ ಅತೀ ಸಮೀಪ ಇರುವ ಹಿಂಡಲಗಾ ಗ್ರಾಮದ ಜನಪ್ರಿಯ ಉದ್ಯಮಿ, ಸಮಾಜ ಸೇವಕರು ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು ಆದ ನಾಗೇಶ ಮನೊಳ್ಕರ ಅವರಿಗೆ ಬಿಜೆಪಿಯ ಭಾಗ್ಯದ ಬಾಗಿಲು ತೆರೆಯುವಂತ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಮೂಲತಃ ಕೃಷಿ ಕುಟುಂಬದ ಮರಾಠಿ ಸಮುದಾಯದ ಸರಳ ವ್ಯಕ್ತಿಯಾದ ಇವರು, ಉದ್ದಿಮೆಯಲ್ಲಿ ಆಸಕ್ತಿ ವಹಿಸಿ, ತಮ್ಮ ಕ್ಷೇತ್ರದಲ್ಲಿ ಹಲವಾರು ಕಾಜು ಪಾಕ್ಟರಿಗಳನ್ನು ತೆರೆದು, ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಅದೇ ರೀತಿ ರಿಯಲ್ ಎಸ್ಟೇಟ್ ಉದ್ದಿಮೆ ಕೂಡಾ ಇವರಿಗೆ ಒಲಿದು ಬಂದಿದ್ದು, ಅದರಿಂದ ಅನೇಕ ಮಾಧ್ಯಮ ಹಾಗೂ ಬಡ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಸುರು ನೀಡಿ, ಕ್ಷೇತ್ರದ ಜನ ಮನದಲ್ಲಿ ಹಸಿರಾಗಿದ್ದಾರೆ, ಅದಕ್ಕಾಗಿಯೇ ರಾಜಕೀಯ ಅಧಿಕಾರವೂ ಇವರಿಗೆ ಒಲಿದು, ಇಂದು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿದ್ದಾರೆ..

ಸುಮಾರು 30 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ, ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ, ಜನ ಇಷ್ಟ ಪಡುವ ಇಂತಹ ಸರಳ ವ್ಯಕ್ತಿತ್ವದ ಅಭ್ಯರ್ಥಿಯ ಮೇಲೆ ಬೆಳಗಾವಿಯ ಸಾಹುಕಾರರಾದ ರಮೇಶ ಜಾರಕಿಹೊಳಿ ಅವರ ಕೃಪೆಯು ಮೂಡಿದೆ.

ಕಳೆದ ಎರಡು ದಿನಗಳಿಂದ ಬೆಳಗಾವಿಯ ಪ್ರಭಾವಿ ರಾಜಕಾರಣಿಯಾದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ನಾಗೇಶ ಮಂಡೋಳ್ಕರ ಅವರನ್ನು ಕರೆದೊಯ್ದು, ರಾಜ್ಯ ಬಿಜೆಪಿಯ ಪ್ರಮುಖ ನಾಯಕರನ್ನು ಬೇಟಿ ಮಾಡಿಸಿ, ಬರುವ ವಿಧಾನಸಭೆ ಚುನಾವಣೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೂಕ್ತ ಅಭ್ಯರ್ಥಿ ಎಂದು ಪರಿಚಯಿಸಿದಂತಿದೆ…

ಬೆಳಗಾವಿಯ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ಅನೇಕ ಜನೋಪಕಾರಿ ಕೆಲಸ ಮಾಡುತ್ತಾ ಬಂದಿರುವ ನಾಗೇಶ ಮನೊಳ್ಕರ ಅವರ ಜನಪ್ರಿಯತೆ ಇಂದು ಅವರನ್ನು ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿ ನೋಡುವ ಎಲ್ಲಾ ಲಕ್ಷಣಗಳು ಕಾಣುವಂತಿವೆ..

ಒಂದು ವೇಳೆ ಬೆಳಗಾವಿಯ ಸಾಹುಕಾರರ ಯೋಚನೆಗೆ ಹಸಿರುಚಿನ್ನೆ ದೊರೆತದ್ದೆ ಆದರೆ ಸಮಾಜ ಸೇವಕ, ಸೂಕ್ತ ನಾಯಕನಿಗೆ ಅಧಿಕಾರದ ಬಲವೂ ದೊರೆತರೆ ಕ್ಷೇತ್ರದ ಜನತೆಗೆ ಮತ್ತಷ್ಟು ಒಳ್ಳೆಯದಾಗಬಹುದು..

ವರದಿ :ಪ್ರಕಾಶ ಕುರಗುಂದ.


Join The Telegram Join The WhatsApp
Bharath Vaibhav
the authorBharath Vaibhav

Leave a Reply