ಮುದಗಲ್:- ರಾಯಚೂರು ಜಿಲ್ಲೆಯ ಲಿಂಗಸೂಗೂರ ತಾಲ್ಲೂಕಿನ ಮುದಗಲ್ ಪಟ್ಟಣ ಸಮೀಪದ ಹೂನೂರು ಗ್ರಾಮದ ಶ್ರೀ ಸಂಗಮೇಶ್ವರ ಜಾತ್ರಾಮಹೋತ್ಸವ ಸೋಮವಾರ ಅದ್ದೂರಿಯಾಗಿ ಜರುಗಿತು
ಪತ್ರಿ ವರ್ಷದಂತೆ ಈ ವರ್ಷ ಕೂಡ ಶ್ರಾವಣ ಮಾಸದ ನಾಲ್ಕನೇ ಸೋಮುವಾರ ಹೂನೂರು ಗ್ರಾಮದ ಶ್ರೀ ಸಂಗಮೇಶ್ವರ ಜಾತ್ರೆ ಜರುಗಿತು ಮಹಿಳೆಯರ ಕುಂಬ ಕಳಸ,ಡೊಳ್ಳು, ಭಜಾಭಜಂತ್ರಿ ವಿವಿಧ ವಾದ್ಯಮೇಳಗಳೊಂದಿಗೆ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಹಳ್ಳಕ್ಕೆ ಹೋಗಿ ಗಂಗೆ ಪೂಜೆ ಸಲ್ಲಿಸಿ ನಂತರ ಸಂಗಮೇಶ್ವರ ದೇವಸ್ಥಾನ ವರಗೆ ಕಳಸದ ಮೆರವಣಿಗೆ ಮೂಲಕ ಕಳಸದೋರಣ ಕಾರ್ಯಕ್ರಮ ಜರುಗಿತು.
ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ದೇವರಿಗೆ ಬೆಳಗ್ಗೆಯಿಂದ ವಿಶೇಷ ಪೂಜೆಗಳು ನಡೆದವು ನಂತರ ಭಕ್ತರಿಗೆ ಅನ್ನ ಸಂಪರ್ಕನ ಕಾರ್ಯಕ್ರಮ ನಡೆಯಿತು.
ವರದಿ:-ಮಂಜು ಕುಂಬಾರ್