ಕೂಡ್ಲಿಗಿ:- ಸೆ 29 ರಂದು ಜಂಟೀ ಸಭೆಯ ಭರವಸೆ_ಹಾಸ್ಟೆಲ್ ನೌಕರರ ಧರಣಿ ಸತ್ಯಾಗ್ರಹ ಸ್ಥಗಿತ ವಿಜಯನಗರ ಜಿಲ್ಲಾ ಪಂಚಾಯಿತಿ ಮುಂದೆ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಸೆಪ್ಟೆಂಬರ 20 ರಂದು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳಾದ ಸದಾಶಿವ ಪ್ರಭು ಇವರು ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದರು. ನೌಕರರ ಸಮಸ್ಯೆಗಳ ಬಗ್ಗೆ ರಾಜ್ಯ ಉಪಾಧ್ಯಕ್ಷರಾದ ಮರಡಿ.ಜಂಬಯ್ಯನಾಯಕರವರು ವಿವರಿಸಿದರು
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಇಒ ರವರು ಸೆಪ್ಟೆಂಬರ 29 ರಂದು ನೌಕರರಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ,ಬಳ್ಳಾರಿಯ ರಂಗನಾಥ ಏಜೆನ್ಸಿ ಮತ್ತು ಕಲ್ಬುರ್ಗಿಯ ಹೊರಗುತ್ತಿಗೆ ಏಜೆನ್ಸಿಯವರನ್ನು, ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗು ಸಂಘದ ಮುಖಂಡರ ಜಂಟೀ ಸಭೆ ಕರೆಯುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಹೋರಾಟದ ಧರಣಿ ಸತ್ಯಾಗ್ರಹವನ್ನು ಸ್ಥಗಿತಗೊಳಿಸಲಾಯಿತು.
ಈ ಸಮಯದಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಮುಂತಾದ ಇಲಾಖ ಅಧಿಕಾರಿಗಳು ಉಪಸ್ಥಿತರಿದ್ದರು.ವಿಜಯನಗರ ಜಿಲ್ಲೆಯ ನೂರಾರು ಹಾಸ್ಟೆಲ್ ನೌಕರ ಪ್ರತಿನಿಧಿಗಳು ಭಾಗವಹಿಸಿದ್ದರು.
ಸರಕಾರಿ ನೌಕರರ ಒಕ್ಕೂಟದ ನಾಗರಾಜ ಪತ್ತಾರ್, ದಲಿತ ಹಕ್ಕುಗಳ ಸಮಿತಿಯ ಬಿ.ತಾಯಪ್ಪ ನಾಯಕ, ಸಿಐಟಿಯು ಮುಖಂಡರಾದ ಎಂ.ಗೋಪಾಲ್, ಯಲ್ಲಾಲಿಂಗ,ಮೋರಾರ್ಜಿ ಶಿಕ್ಷಕರ ಸಂಘದ ಮುಖಂಡರಾದ ಬಸವರಾಜ್ ಇವರು ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.
ವರದಿ :- ವಿ.ಜಿ.ವೃಷಭೇಂದ್ರ