Join The Telegram | Join The WhatsApp |
ಮಲ್ಲಮ್ಮನ ಬೆಳವಡಿ: ಕುಸಿಯುತ್ತಿರುವ ಮನೆಗಳು ಕೈ ಸೋತ ಕುಟುಂಬಗಳು ಜೀವನದಲ್ಲಿ ಒಂದೊಳ್ಳೆ ಮನೆ ದುಡಿಯಲು ಕೈತುಂಬ ಕೆಲಸ ಸಿಕ್ಕರೆ ಸಾಕು ಎಂಬುದು ಪ್ರತಿ ಬಡವರ ಆಸೆಯಿರುತ್ತದೆ ಅಂತಹದರಲ್ಲಿ ಕಟ್ಟಿದ ಮನೆಯೇ ಕುಸಿದರೆ ಅವರ ಕನಸೇ ಕುಸಿದಂತೇ ಇಂತಹ ಪರಿಸ್ಥಿತಿ ಬಡವರಿಗೆ ಬಂದಾಗ ಯಾರಿಗೆ ಹೇಳುವುದು ಕೇಳುವವರು ಯಾರು ಬಡವರಾಗಿ ಹುಟ್ಟಿದ್ದೇ ತಪ್ಪು ಅವರ ಕೂಗು ಅರಣ್ಯ ರೋದನವಾಗಿದೆ ಕಣ್ಣೀರೇ ಕೂಳಾಗಿದೆ ಪ್ರಕೃತಿಯ ಕೋಪಕ್ಕೆ ಬಲಿಯಾಗಬೇಕಾಗಿದೆ ಭೂತಾಯಿ ಮನೆಗಳನ್ನೇ ನುಂಗಿದ್ದಾಳೆ ಅಷ್ಟೇ ಅಲ್ಲ ಮನೆಯಲ್ಲಿದ್ದ ಸಾವಿರಾರು ರೂಪಾಯಿಗಳ ವಸ್ತುಗಳು ಪಾತಾಳ ಸೇರಿವೆ ಇಷ್ಟೆಲ್ಲಾ ಹೇಳುತ್ತಿರುವುದು ಬೈಲಹೊಂಗಲ ತಾಲೂಕಿನ ಉಡಿಕೇರಿ ಎಂಬ ಗ್ರಾಮದಲ್ಲಿ ಬಡ ಕುಟುಂಬಗಳಾದ ಪರಮೇಶ್ವರ ಚಿಪ್ಪಲಕಟ್ಟಿ ಶಂಕರಪ್ಪ ಕಾಳಿಂಗಪ್ಪ ಹಾಲನ್ನವರ ಮಡಿವಾಳಯ್ಯ ಯರಗಂಬಳಿಮಠ ಪಕೀರಪ್ಪ ಕಿಂದ್ರಿ ಬಸಯ್ಯ ಯರಗಂಬಳಿ ಮಠ ಬಸಪ್ಪ ಪೂಜಾರ ಇವರ ಮನೆಗಳು ಸಂಪೂರ್ಣ ಕುಸಿದಿವೆ ಮನೆಗಳ ಕೆಳಗಡೆ ನೀರಿನ ಹೊಂಡವೆ ನಿರ್ಮಾಣವಾಗಿದೆ ಇದಕ್ಕೆ ಕಾರಣ ಭೀಕರ ಮಳೆ ಭೂಮಿಯೇ ಬಾಯಿ ಬಿಡುವಂತೆ ಮಾಡಿದೆ ಶತಮಾನ ಕಂಡ ಅಪಾಯಕಾರಿ ಮಳೆಆಗಿದೆ ಸಂಬಂಧಿಸಿದ ಜನಪ್ರತಿನಿಧಿಗಳು ಸಂಬಂಧಿಸಿದ ಇಲಾಖೆ ಇದರ ಕಾರಣ ಹುಡುಕಿ ಬಡವರ ಕಣ್ಣೋರಿಸಬೇಕಾಗಿದೆ ಇನ್ನುಳಿದ ಮನೆಗಳು ಹೀಗಾಗುವ ಮೊದಲು ಕ್ರಮ ಕೈಗೊಳ್ಳಬೇಕೆಂಬುದು ಕುಟುಂಬಗಳ ಆಶಯ
ವರದಿ: ದುಂಡಪ್ಪ ಹೂಲಿ
Join The Telegram | Join The WhatsApp |