ನಿಪ್ಪಾಣಿ :- ಸದಲಗಾ ಪೊಲೀಸ್ ಠಾಣೆಯ ಪಿ ಎಸ್ ಐ ಶಿವಕುಮಾರ್ ಬಿರಾದಾರ್ ವಾಹನ ಚಾಲಕರಿಗೆ ಕರೆ ನೀಡಿದ್ದರು.
ಶನಿವಾರ ಸಂಜೆ ಬೋರಗಾವ ಸರ್ಕಲನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಚಿಕ್ಕೋಡಿ ಹಾಗೂ ಸದಲಗಾ ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಹೆಲ್ಮೆಟ್ ಜನಜಾಗೃತಿ ರ್ಯಾಲಿಯಲ್ಲಿ ಪಾಲ್ಗೊಂಡು ವಾಹನ ಸವಾರರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿಮ್ಮ ಜೀವ ಅತ್ಯಮೂಲ್ಯವಾಗಿದ್ದು ನಿಮ್ಮ ಹಿಂದೆ ತಂದೆ ತಾಯಿ ಪತ್ನಿ ಮಕ್ಕಳು ತಮ್ಮನ್ನು ಅವಲಂಬಿಸಿದ್ದು ವಾಹನ ಚಲಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ತಮ್ಮ ಜೀವ ರಕ್ಷಿಸಿಕೊಳ್ಳಬೇಕೆಂದರು. ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಯ ಮುಖಾಂತರ ಕಳೆದ ಅನೇಕ ದಿನಗಳಿಂದ ಹೆಲ್ಮೆಟ್ ಜನಜಾಗೃತಿ ರ್ಯಾಲಿ ಮುಖಾಂತರ ವಾಹನ ಚಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದ್ದು
ಈಗಾಗಲೇ ಸದಲಗಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕಾರದಗಾ,ಮಾಂಗುರ,ಮಾನಕಾಪುರ,ಬೋರಗಾವ, ಸದಲಗಾ ಹಾಗೂ ಬೇಡಕಿಹಾಳ ಸರ್ಕಲ್ ಗಳಲ್ಲಿ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಗಡಿ ಭಾಗದ ಜನರು ಜನಜಾಗೃತಿ ಅಭಿಯಾನದಲ್ಲಿ ಕೈಜೋಡಿಸಬೇಕೆಂದು ತಿಳಿಸಿ ಜೀವ ರಕ್ಷಿಸಿಕೊಳ್ಳಬೇಕೆಂದರು.
ಈ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಲ್ ನಲ್ಲಿ ಪಿಎಸ್ಐ ಶಿವಕುಮಾರ್ ಬಿರಾದಾರ್ ಪ್ರವಾಸಿಗರಿಗೆ ಹೆಲ್ಮೆಟ್ ಹಾಕಿ ಹೆಲ್ಮೆಟ್ ಧರಿಸುವುದರಿಂದ ಅಪಘಾತ ಸಂದರ್ಭದಲ್ಲಿ ತಮ್ಮ ಜೀವ ರಕ್ಷಿಸಲು ಸಾಧ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ 20 ಕ್ಕೂ ಅಧಿಕ ಪೊಲೀಸರು ಹೆಲ್ಮೆಟ್ ಧರಿಸಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ವರದಿ ರಾಜು ಮುಂಡೆ