ಐನಾಪುರ:-ಇಂದಿನ ಕಾಂಗ್ರೆಸ್ ಪಕ್ಷದ ಸರಕಾರ ಕೂಲಿಕಾರ್ಮಿಕರ, ಮಹಿಳೆಯರ ಪರವಾಗಿದ್ದು, 200 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳ ಸದುಪಯೋಗ ಪಡೆಯುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಐನಾಪುರ ಪಟ್ಟಣದಲ್ಲಿ 3 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಮಾರಂಭದಲ್ಲಿ ಪಟ್ಟಣ ಪಂಚಾಯತ ವತಿಯಿಂದ ಪೌರಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದ ಜನತೆ ನಿರೀಕ್ಷೆಗೆ ಹುಸಿಯಾಗದಂತೆಸ್ಪಂದಿಸುವಕೆಲಸಮಾಡುತ್ತೇವೆ.
ಪ್ರತಿಯೊಬ್ಬ ತಾಯಂದಿರರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದರು. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರೆ,ಇಂಜಿನಿಯರ್ ವಿ.ಎಂ ನಾಗನಕೇರಿ ಪಟ್ಟಣ ಪಂಚಾಯತಿ ಸದಸ್ಯರು ಸೇರಿಕೊಂಡು ಶಾಸಕರಿಗೆ ಪೌರಸನ್ಮಾನ ನೆರವೇರಿಸಿದರು.
ಪಟ್ಟಣ ಪಂಚಾಯತಿ ಸದಸ್ಯ ಅರುಣಗಾಣಿಗೇರ ಮಾತನಾಡಿ, ನೇರ ನುಡಿಯ ಹೃದಯ ಶ್ರೀವಂತಿಕೆಯ ಇಂಥ ಶಾಸಕರನ್ನು ಪಡೆದಿರುವುದುದು ಕಾಗವಾಡ ಮತಕ್ಷೇತ್ರದ ಜನರು ಪುಣ್ಯ ಎಂದರು.
ಮುಖಂಡರಾದ ಸುಭಾಷಗೌಡ ಪಾಟೀಲ, ಚಮನರಾವ್ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಪ್ರವೀಣ ಗಾಣಿಗೇರ, ಜನಶಕ್ತಿ ಬ್ಯಾಂಕಿನ ಅಧ್ಯಕ್ಷ ಪ್ರಶಾಂತರಾವ್ ಅಪರಾಜ ಪಟ್ಟಣ ಪಂಚಾಯತಿ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಕುಚನೂರೆ, ಸಂಜಯ ಭೈರಡಿ, ಸುರೇಶ ಗಾಣಿಗೇರ, ಗುರುರಾಜ ಮಡಿವಾಳರ, ಕುಮಾರ ಜಯಕರ, ಸುರೇಶ ಅಡಿಸೇಡಿ, ವಿಜಯ ಹರಳೆ, ರಾಜು ಹರಳೆ, ದಾದಾ ಜಂತೆನ್ನವರ, ಧರೆಪ್ಪ ಹರಳೆ, ಸದಾ ಐಹೊಳೆ, ಎಸ್ಸಿ,ಎಸ್ಪಿ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದರಾಯ ಗಾಡಿವಡ್ಡರ, ಮುಖಂಡರಾದ ಡಾ.ಅರವಿಂದರಾವ್ ಕಾರ್ಚಿ, ಪ್ರಕಾಶ ಕೋರ್ಟು, ವಿಶ್ವನಾಥ ನಾಮದಾರ, ಅನೀಲ ಸತ್ತಿ, ಶೀತಲ ಬಾಲೋಜಿ, ಮಲ್ಲು ಕೋಲಾರ, ಸಂಜಯ ಕುಸನಾಳೆ, ಪ್ರಕಾಶ ಚಿನಗಿ, ವಿಕಾಸ ಪಂಡರೆ, ವಸಂತ ಗಾಡಿವಡ್ಡರ, ಕುಮಾರ ಗಾಡಿವಡ್ಡರ ಮಹಿಳೆಯರು ಉಪಸ್ಥಿತರಿದ್ದರು.
ವರದಿ :ಮುರಗೇಶ ಗಸ್ತಿ