ಇಲಕಲ್ಲ :-ನಗರದ ಆರಾಧ್ಯ ದೈವ ಶ್ರೀ ವಿಜಯಮಹಾಂತೇಶ ಪುಣ್ಯ ಸ್ಮರಣೆ ಅಂಗವಾಗಿ ಇಲಕಲ್ಲ ನಗರಕ್ಕೆ ಆಗಮಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯೆ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಅವರು
ಶ್ರೀ ವಿಜಯ ಮಹಾಂತೇಶ ಕರ್ತೃ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದರು
ತದನಂತರ ಮುರ್ತುಜಾ ಖಾದ್ರಿ ದರ್ಗಾ ಗೆ ಭೇಟಿ ನೀಡಿ ಆರ್ಶಿವಾದ ಪಡೆದರು ತದನಂತರ ಇಲಕಲ್ಲ ನಗರದ ವಾರ್ಡ್ ನಂಬರ 4ರ ಶಿವಾಜಿನಗರ ಹಾಗೂ ಹೊಸಪೇಟೆ ಗಲ್ಲಿಯಲ್ಲಿನ ಸಂಕಷ್ಟದಲ್ಲಿರುವ ನೇಕಾರ ಕುಟುಂಬಗಳ ಮನೆಗೆ ಭೇಟಿ ನೀಡಿ ಕುಂದು ಕೊರತೆಯನ್ನು ಆಲಿಸಿದರು ನಂತರ ತಮ್ಮದೇ ಆದ ಎಮ್ ಎ
ಸ್ ಈಟಿ ಫೌಂಡೇಶನ್ ವತಿಯಿಂದ ನೇಕಾರ ಕುಟುಂಬಗಳಿಗೆ ದಿನಸಿಕಿಟ್ ವಿತರಿಸಿದರು.
ನೇಕಾರರ ತಾವು ತಯಾರಿಸಿದ ಸೀರೆಗಳು ಬೆಲೆನೇ ಇಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಾಗ ತಾವು ತಯಾರಿಸಿ ಇಟ್ಟಿರುವ ಸೀರೆಗಳನ್ನು ಸ್ಥಳದಲ್ಲಿ ಖರೀದಿಸಿದರು, ನಂತರ ಮಾತನಾಡಿದ ರಕ್ಷಿತಾ ಈಟಿ ಜಿಲ್ಲೆಯ ಸಂಪೂರ್ಣ ಸುತ್ತಾಡಿದ್ದೇನೆ ನೇಕಾರರ ಎಲ್ಲ ಸಮಸ್ಯೆಗಳನ್ನು ಅರಿತಿದ್ದೇನೆ ಸಮಸ್ಯೆಗಳನ್ನ ಶೀಘ್ರವೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ, ಮುಂದೆ ಸ್ವತಃ ನಾನೇ ತೆರಳಿ ತಮ್ಮೆಲ್ಲ ಸಮಸ್ಯೆಯನ್ನು ತಿಳಿಸಿ ಶೀಘ್ರವೇ ಶಾಶ್ವತ ಪರಿಹಾರ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಇದೇ ಸಂಧರ್ಭದಲ್ಲಿ ಅವರೊಂದಿಗೆ ಮಹಿಳಾ ಕಾಂಗ್ರೆಸ್ ಮುಖಂಡೆ ಸರಸ್ವತಿ ಈಟಿ,ವೈಶಾಲಿ ಘಂಟಿ, ವಿಂದ್ಯ ಸರದೇಸಾಯಿ, ಸಾವಿತ್ರಿ ಗಾಜಿ,ಮಂಜುಳಾ ಗರಡಿಮನಿ, ರೇಣುಕಾ ನ್ಯಾಮಗೌಡರ, ಹಾಗೂ ಇತರರು ಇದ್ದರು.
ವರದಿ ದಾವಲ್ ಶೇಡಂ