Join The Telegram | Join The WhatsApp |
ಕಲಬುರಗಿ : ಬಿಜೆಪಿಯವರು ಈಗಾಗಲೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಪಂಚರ್ ಮಾಡಿದ್ದಾರೆ, ಯಡಿಯೂರಪ್ಪ ಬಗ್ಗೆ ನನಗೆ ಸಿಂಪತಿ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಪಂಚರ್ ಆಗದಿದ್ದರೆ ಸಾಕು, ಈಗಾಗಲೇ ಯಡಿಯೂರಪ್ಪನವರನ್ನು ಬಿಜೆಪಿಯವರು ಪಂಚರ್ ಮಾಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ನಮ್ಮ ಬಗ್ಗೆ ಏನು ಮಾತನಾಡೋದು? ಯಡಿಯೂರಪ್ಪ ಬಗ್ಗೆ ನನಗೆ ಸಿಂಪತಿ ಇದೆ ಎಂದು ಎಂದು ಹೇಳಿದ್ದಾರೆ.
ಯಡಿಯೂರಪ್ಪರನ್ನು ಬಿಜೆಪಿಯವರು ಸಿಎಂ ಸ್ಥಾನದಿಂದ ಕಿತ್ತು ಹಾಕಿಲ್ವಾ? ಕಳೆದ ಬಾರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷರಾಗಿದ್ದಾಗ ಎಷ್ಟು ಸೀಟು ಬಂದಿತ್ತು.
ನಾವು ಹಗಲುಗನಸು ಕಾಣುತ್ತಿಲ್ಲ. ಸಿಎಂ ಮಾಡುವುದು ಹೈಕಮಾಂಡ್, ನಮ್ಮ ಶಾಸಕರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯಿದೆ ಎಂದರು.
Join The Telegram | Join The WhatsApp |