ನವದೆಹಲಿ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವ್ರಿಗೆ ಸಲಹೆ ನೀಡಿದ್ದು, ಎಲ್ಲಾ ಧರ್ಮವನ್ನ ಗೌರವಿಸಬೇಕು ಮತ್ತು ಸನಾತನ ಧರ್ಮವನ್ನ ಅನುಸರಿಸುವವರ ಭಾವನೆಗಳನ್ನ ನೋಯಿಸಬಾರದು ಎಂದು ಹೇಳಿದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಶನಿವಾರ ಸನಾತನ ಧರ್ಮವನ್ನು ‘ಡೆಂಗ್ಯೂ’ ಮತ್ತು ‘ಮಲೇರಿಯಾ’ ಗೆ ಹೋಲಿಸಿದ್ದಾರೆ ಮತ್ತು ಅದನ್ನ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದಾರೆ.
ಅವರ ಹೇಳಿಕೆಗಳು ಭಾರಿ ಕೋಲಾಹಲವನ್ನ ಉಂಟು ಮಾಡಿದ್ರೂ, ಅವ್ರು ತಮ್ಮ ಹೇಳಿಕೆಗೆ ಬದ್ಧರಾಗರುವುದಾಗಿ ತಿಳಿಸಿದ್ದಾರೆ.
ಇನ್ನು ಸನಾತನ ಧರ್ಮವು ‘ಜಾತಿವಾದ’ ಮತ್ತು ‘ಅಸಮಾನತೆಯನ್ನು’ ಉತ್ತೇಜಿಸುತ್ತದೆ ಮತ್ತು ಅದನ್ನ ತೆಗೆದುಹಾಕಬೇಕು ಎಂದು ಹೇಳಿದರು.
ಕಾಂಗ್ರೆಸ್ ಸ್ಟಾಲಿನ್ ಅವರನ್ನ ಬೆಂಬಲಿಸಿದ್ದರೆ, ಎನ್ಡಿಎ ಮೈತ್ರಿಕೂಟದ ಪ್ರಮುಖ ಭಾಗವಾಗಿರುವ ಮಮತಾ ಬ್ಯಾನರ್ಜಿ ಅವರು ಸನಾತನ ಧರ್ಮವನ್ನ ಗೌರವಿಸುತ್ತೇನೆ ಮತ್ತು ಡಿಎಂಕೆ ನಾಯಕ ಎಲ್ಲಾ ಧರ್ಮಗಳನ್ನ ಗೌರವಿಸಬೇಕು ಎಂದು ಹೇಳಿದ್ದಾರೆ.
“ತಮಿಳುನಾಡು, ದಕ್ಷಿಣ ಭಾರತದ ಜನರು ಮತ್ತು ಸ್ಟಾಲಿನ್ ಬಗ್ಗೆ ನನಗೆ ಅಪಾರ ಗೌರವವಿದೆ.
ಆದ್ರೆ, ನನ್ನ ವಿನಮ್ರ ಗೌರವವು ಅವರ ಮೇಲಿರುತ್ತದೆ – ಪ್ರತಿಯೊಂದು ಧರ್ಮ, ಅವರಿಗೆ ಪ್ರತ್ಯೇಕ ಭಾವನೆಗಳಿವೆ. ಭಾರತವು ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ದೇಶವಾಗಿದೆ.
ನಾನು ಸನಾತನ ಧರ್ಮವನ್ನ ಗೌರವಿಸುತ್ತೇನೆ. ಏಕೆಂದರೆ ನಮಗೆ ಋಗ್ವೇದ, ಅಥರ್ವವೇದ ತಿಳಿದಿದೆ. ಅದು ಉಪಾಸನೆ, ಆರಾಧನಾ, ಬಂಧನದಿಂದ ಬಂದಿತು” ಎಂದಿದ್ದಾರೆ.