Join The Telegram | Join The WhatsApp |
ಲಿಂಗಸುಗೂರು : ತಾಲೂಕಿನ ಪುರಸಭೆ ವ್ಯಾಪ್ತಿಯ ಐದನೇ ವಾರ್ಡ್ ನಲ್ಲಿ ಗಡ್ಡಿಗದ್ದೆಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.
ಕಸಬಾ ಲಿಂಗಸೂಗೂರು ಗ್ರಾಮ ದ ಶಿಲ್ಪಿಗಳಾದ ಕಾಳಪ್ಪ ತಾತಾ ಬಡಿಗೇರ್ ಮತ್ತು ಯಮನಪ್ಪ ತಾತಾ ಬಡಿಗೇರ್ ಈರ್ವರು ದೇವಿಯ ಮೂರ್ತಿಗಳ ನಿರ್ಮಿಸುವ ಕಾಯಕವುಳ್ಳವರಾಗಿರುವರು.ಇವರು ಬೆಂಗಳೂರು ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಕಾಳಪ್ಪತಾತಾ. ಬಡಿಗೇರ್ ಮತ್ತು ಯಮನಪ್ಪ ತಾತಾ ಬಡಿಗೇರ. ಈರ್ವರು ನಿರ್ಮೀಸಿರುವ ಗಡ್ಡಿ ಗದ್ದೆಮ್ಮದೇವಿ ಯ ಮೂರ್ತಿಯನ್ನು ಧಾರ್ಮಿಕವಾಗಿ ಲೋಕಾರ್ಪಣೆ ಗೆ ನೀಡಿದರು.ಲಿಂಗಸೂಗೂರು ತಾಲೂಕು ಪುರಸಭೆ ವ್ಯಾಪ್ತಿಯ ಐದನೇ ವಾರ್ಡ್ ನಲ್ಲಿ ಸಂತೆ ಬಂಜಾರ ಹಿಂದೆ ವಾಸಿಸು ತ್ತಿರುವ ಸಿಂಧೊಳ್ಳಿ ಜನಾಂಗದ ವರು ಸುಮಾರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದುರಗಮ್ಮದೇವಿ ಹಾಗೂ ಮುನೇಶ್ವರ ಮೂರ್ತಿ ಗದ್ದೆಮ್ಮದೇವಿಯ ಮೂರ್ತಿ ಯೊಂದಿಗೆ ಕಾಳಿಕದೇವಿ ಹುಡ್ ವರ್ಕ್ ಲಕ್ಷ್ಮಿ ಗುಡಿ ಹತ್ತಿರ ಮೂರ್ತಿಯನ್ನು ನಿರ್ಮಿಸಿದ್ದನ್ನು ಅಲ್ಲಿಂದಲೇ ಪೂಜೆ ಸಲ್ಲಿಸಿ ಬಾಜಾ ಭಜೆಂತ್ತ್ರಿ ಹಲಿಗೆ ಡೊಳ್ಳು ವಾದ್ಯಗಳ ಮೂಲಕ ಯುವಕರು ಕುಣಿದು ಕುಪ್ಪಳಿಸುತ್ತ ಬಂಡಾರವನ್ನು ಸಿಂಪಡಿಸುತ್ತ ಮಹಿಳೆಯರು ಮಕ್ಕಳು ಭಕ್ತಿಭಾವದಿಂದ ಪೂಜೆ ಸಲ್ಲಿಸಿ ಗದ್ದೆಮ್ಮ ದೇವಿಯ ಕೃಪೆಗೆ ಪಾತ್ರ ರಾದರು.ಹಾಗೂ ಗದ್ದೆಮ್ಮ ದೇವಿಯನ್ನು ಟ್ರಾಕ್ಟರ್ ಮೂಲಕ ಪ್ರಮುಖ ರಸ್ತೆಗಳ ಮೂಲಕ ಸಂಚರಿಸುತ್ತ ಮೆರವಣಿಗೆಯೊಂದಿಗೆ ಸಾಗಿ ನಿಯೊಜಿಸಿರುವ ದೇವಿಯ ಗುಡಿಯಲ್ಲಿ ಯ ಸ್ಥಳದಲ್ಲಿ ಮೂರ್ತಿ ಯನ್ನು ಪೂಜೆ ಪುನಸ್ಕಾರ ದ ಮೂಲಕ ಪ್ರತಿಷ್ಠಾ ಪಿಸಿದರು..ಈ ಸಂದರ್ಭದಲ್ಲಿ ಪೂಜಾರಿ ಜಂಬಣ್ಣ ಪೂಜಾರಿ ಕರಿಯಪ್ಪ. ಈರಪ್ಪ ಕೆಂಪು ಗದ್ದೆಪ್ಪ.ಹಾಗೂ ಸಿಂಧೊಳ್ಳಿ ಅಲೆಮಾರಿ ಸಮುದಾಯ ದ ಗುರು ಹಿರಿಯರು ಗಣ್ಯರು ನಾಗರಿಕರು ಇನ್ನಿತರ ರ ಸಮ್ಮುಖದಲ್ಲಿ ಮೂರ್ತಿಯನ್ನು ಧಾರ್ಮಿಕ ಲೋಕಾರ್ಪಣೆ ಗಾಗಿ ಪ್ರತಿಷ್ಠಾ ಪಿಸುವ ಸಂದರ್ಭದಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಶಿಲ್ಪಿ ಗಳಾದ ಕಾಳಪ್ಪ ತಾತಾ ಬಡಿಗೇರ್ ಮತ್ತು ಯಮನಪ್ಪ ತಾತಾ ಬಡಿಗೇರ ಕಸಬಾಲಿಂಗಸೂಗೂರು.ರವರಿಗೆ.ಸಿಂಧೊಳ್ಳಿಸಮುದಾಯದವರು ಸನ್ಮಾನಿಸಿ ಗೌರವಿಸಿದರು.
ವರದಿ : ಶಾಮೀದ್ಅಲಿ ಕರಡಕಲ್
Join The Telegram | Join The WhatsApp |