Join The Telegram | Join The WhatsApp |
*ಬೆಳಗಾವಿ* ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರು ಮೇಲಿನಂತೆ ಹೇಳಿಕೆ ನೀಡಿ, ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ..
ಮೊನ್ನೆ ನಿಪ್ಪಾಣಿಯಲ್ಲಿ ನಡೆದ ಮಾನವ ಬಂಧುತ್ವ ವೇದಿಕೆಯ ಖಾಸಗಿ ಕಾರ್ಯಕ್ರಮದಲ್ಲಿ ಹಿಂದೂ ಎಂಬ ಪದವು ಪರ್ಷಿಯನ್ ಭಾಷೆಯಿಂದ ಬಂದಿದ್ದು, ಅದು ಅಶ್ಲೀಲದ ಅರ್ಥ ಬರುವ ಪದ ಎಂಬ ಹೇಳಿಕೆ ರಾಜ್ಯ, ರಾಷ್ಟ್ರವ್ಯಾಪಿಯಾಗಿ ಚರ್ಚೆಯಾಗುತ್ತಿದೆ..
ಅದರ ಕುರಿತಾಗಿ ವಿರೋಧ ಪಕ್ಷದವರು, ಸಮಾಜದ ವಿವಿಧ ಕ್ಷೇತ್ರಗಳ ಜನರು ಅವರ ಈ ಹೇಳಿಕೆಗೆ ಕ್ಷಮೆ ಕೇಳಬೇಕು ಎಂಬ ಒತ್ತಾಯ ಹೇರುತ್ತಿದ್ದು, ಸ್ಟತ ಸತೀಶ ಜಾರಕಿಹೊಳಿ ಅವೇರೆ ಇದಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ,,
ಮೊದಲು ನಾನು ಯಾವ ಆಧಾರದಲ್ಲಿ ಕ್ಷಮಾಪಣೆ ಕೇಳಬೇಕು?? ನಾನು ಮಾತನಾಡಿದ್ದು, ನನ್ನ ಹೇಳಿಕೆ ತಪ್ಪು ಎಂದು ಅವರೆಲ್ಲ ಸಾಬೀತು ಮಾಡಲಿ, ಆಗ ನಾನು ಬರೀ ಕ್ಷಮಾಪಣೆ ಕೇಳದೆ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ, ರಾಜಕೀಯ ನಿವೃತ್ತಿ ಹೊಂದುತ್ತೆನೆ, ಯಾವ ತ್ಯಾಗಕ್ಕೂ ಸಿದ್ಧ..
ಆದರೆ ತನಿಖೆ ಆಗಿ, ಒಂದು ವೇಳೆ ವರದಿ ನನ್ನ ಪರವಾಗಿ ಬಂದರೆ, ಈಗ ಕ್ಷಮಾಪಣೆ ಕೇಳುವವರು ಯಾವ ತ್ಯಾಗ ಮಾಡುವರು ಎಂದು ಹೇಳಲಿ ಎಂದು ಎದುರಾಳಿಗೆ ತೀಕ್ಷ್ಣವಾಗಿ ಹೇಳಿದರು…
ಅವರು ಈ ವಿಷಯದಲ್ಲಿ ಬರಿ ಕ್ಷಮಾಪಣೆ ಕೇಳಿ ಒಂದು ಹೆಜ್ಜೆ ಮುಂದೆ ಇಟ್ಟರೆ, ನಾನು ನಾಲ್ಕು ಹೆಜ್ಜೆ ಮುಂದೆ ಇಟ್ಟು ಸಾಹಿತಿ ಮಾಡಿ, ನಾ ಎಲ್ಲಾ ತ್ಯಾಗಕ್ಕೂ ಸಿದ್ದನಿರುವೆ, ಒಂದು ವೇಳೆ ಸಾಬೀತು ಆಗದೆ ಹೋದರೆ ನಿಮ್ಮ ನಿಲುವೇನು ಎಂಬ ಪ್ರಶ್ನೆ ಮುಂದಿಟ್ಟರು…
ವರದಿ ಪ್ರಕಾಶ ಕುರಗುಂದ
Join The Telegram | Join The WhatsApp |