This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

Feature Article

ಸರಕಾರ ನಿರ್ಧರಿಸಿದರೆ ಒಂದೇ ಯೋಜನೆಯಲ್ಲಿ ಮೂವರಿಗೆ ಲಾಭ

Join The Telegram Join The WhatsApp

 

ಶ್ರೀಮಂತರು ಶ್ರೀಮಂತರಾಗಿ,ಬಡವರು ಬಡವರಾಗಿ ಉಳಿಯೋ ಮಾತನ್ನು ಕೈ ಬಿಡಿ. ನೀವು ಬದುಕಿ ಇನ್ನೊಬ್ಬರನ್ನು ಬದುಕಿಸಿ. ನನ್ನ ದೇಶ ಮುಂದುವರೆಯುತ್ತೆ ಒಮ್ಮೆ ಯೋಚಿಸಿ.
1).ಬಡವರು
2).ಶ್ರೀಮಂತರು
3).ಸರಕಾರ

ನೀವೆಲ್ಲ ಯೋಚಿಸುತ್ತಿರಬಹುದಲ್ಲ ಏನಿದು ಯಾವ ಯೋಜನೆ? 75 ವರ್ಷದಿಂದ ಇದ್ದ ಸಮಸ್ಯೆ ಬಡವರಿಗಾಗಿ ಭೂಮಿ ಅಂತ ಏನೇನೋ ತಲೆ ಕೆಡಿಸ್ತಾರಲ್ಲ ಅಂತ ಚಿಂತೆನಾ? ನಿಮ್ಮೆಲ್ಲರ ಸಮಸ್ಯೆಗೂ ಉತ್ತರ ಇದೆ ಸಮಾಧಾನವಾಗಿ ಎಲ್ಲವನ್ನು ಓದಿ ಇದಕ್ಕೆ ನಿಮ್ಮ ಪ್ರತಿಕ್ರಿಯೆ ತುಂಬಾ ಮುಖ್ಯವಾದುದ್ದು.
ಈ ಯೋಜನೆಯ ವಿವರ ಪ್ರತಿ ವಾಕ್ಯದಲ್ಲಿದೆ ತಾಳ್ಮೆಯಿಂದ ಅರ್ಥಹಿಸಿಕೊಳ್ಳಿ.ಈ ಯೋಜನೆಯಿಂದ ಯಾರಿಗೆ ಮತ್ತು ಹೇಗೆ ಲಾಭ ಎಂಬುವುದನ್ನು ವಿವರಿಸಲಾಗಿದೆ.
1) ಬಡವರು:
ಪೂರ್ವಿಕರಿಂದಲೂ ಕಾರಣಾಂತರಗಳಿಂದ ಭೂಮಿ ಇಲ್ಲದೆ ಒಂದುಹೋತ್ತಿನ ಊಟಕ್ಕಾಗಿ ಪ್ರತಿದಿನ ಕೆಲಸಕ್ಕೆ ಅಂಗಲಾಚುತ್ತಿದ್ದಾರೆ ಇದೆಲ್ಲ ನಿಮಗೆ & ಸರಕಾರಕ್ಕೆ ಗೊತ್ತಿರುವ ವಿಷಯ ಅಲ್ವಾ?.ಇದನ್ನು ಸರಿದೂಗೋಕೆ ಒಂದು ಒಳ್ಳೆಯ ವಿಚಾರವನ್ನು ನಿಮ್ಮಮುಂದೆ ಇದೆ. ಬಡವರಿಗೆ ಭೂಮಿ ಖರೀದಿಸೋದು ಈಗ ಕನಸೇ ಹೊರತು ನನಸಲ್ಲ. ಬಡವರಿಗೆ ಸರಕಾರದಿಂದ ಭೂಮಿ ಸಿಗುವ ಯೋಜನೆ ಮಾಡಿದರೆ ಇಲ್ಲಿ ದೇಶದ ಪ್ರಗತಿ ಉನ್ನತಕ್ಕೆರುತ್ತೆ ಮತ್ತು ದೇಶ ಬಡತನಮುಕ್ತ ದೇಶ ಆಗುತ್ತೇ ಅನ್ನೋ ವಿಶ್ವಾಸ ಇದೆ. ಭವಿಷ್ಯದಲ್ಲಿ ನನ್ನ ದೇಶದ ಅಭಿರುದ್ಧಿ ಬಹು ಮುಖ್ಯವಾಗಿದೆ. ಈ ಯೋಜನೆ ಜಾರಿಗೆ ಬಂದಲ್ಲಿ ನನ್ನದೇಶ ಓಡುತ್ತಿರುವ ಕುದುರೆಯಂತೆ ಮುನ್ನುಗುತ್ತೆ.ಬಿಳು ಭೂಮಿ, ಬಂಜರು ಭೂಮಿಗಳನ್ನು ಕೃಷಿ ಭೂಮಿಗಳಾಗಿ ಪರಿವರ್ತಿಸಿ ಬಡವರಿಗೆ ಭೂಮಿ ಸಿಗುವಂತೆ ಮಾಡಿದ್ದಲ್ಲಿ ಎಲ್ಲರೂ ಆರ್ಥಿಕವಾಗಿ ಪ್ರಗತಿ ಹೊಂದುತ್ತಾರೆ. ಇದರಿಂದ ಆರ್ಥಿಕವಾಗಿ ನನ್ನ ದೇಶ ಮುಂದುವರೆಯುತ್ತೆ ಒಮ್ಮೆ ಯೋಚಿಸಿ.

.2). ಶ್ರೀಮಂತರು :
ಕೆಲವು ಶ್ರೀಮಂತರ ಆಸ್ತಿ ನೋಡಿದ್ರೆ ನೂರಾರು ಎಕರೆ ಇದೆ ತಪ್ಪೆನಲ್ಲ, ಇವರ ಕೆಲವೊಂದಿಷ್ಟು ಭೂಮಿಗಳು ಬಿಳು ಬಿದಿದ್ದು ತಮಗೂ ಗೊತ್ತಿರೋ ವಿಷಯನೆ ಯಾಕಂದ್ರೆ ಐದು ಬೆರಳು ಸಮವಿಲ್ಲ ಇವರ ಬೇರೆ ಬೇರೆ ಕೆಲಸದ ಒತ್ತಡದಿಂದ ಇರಬಹುದು ಅಥವಾ ಇನ್ನ್ಯಾವದೋ ಕಾರಣಗಳಿಂದಿರಬಹುದು ಕೃಷಿ ಭೂಮಿಗಳು ಪಾಳು ಬಿದ್ದಿರೋದನ್ನು ನೋಡಿದ್ದೇವೆ ಅಲ್ವಾ? ಇಂತಹ ಶ್ರೀಮಂತರ ಭೂಮಿಗಳನ್ನು ಮಿತಗೊಳಿಸುವುದು.ಅಂದರೆ ಈಗಿದ್ದ ಶ್ರೀಮಂತರಿಗೂ ನಷ್ಟ ಬೇಡಾ ಹಾಗಿದ್ರೆ ಏನ್ ಮಾಡಬೇಕು ಚಿಂತೆ ಬೇಡಾ. ಈಗಿದ್ದ ಮಾರುಕಟ್ಟೆಯ ಬೆಲೆಯಲ್ಲಿ ಶ್ರೀಮಂತರ ಭೂಮಿಯನ್ನು ಸರಕಾರ ಖರೀದಿಸಿ ಬಡವರಿಗೆ ಉಳ್ಳೋಕೆ ಕೊಡುವುದು ಇದು ಯಾರಿಗೆ ನಷ್ಟ ಆಗುತ್ತೇ ಹೇಳಿ.ಹೀಗೆ ಮಾಡುವುದರಿಂದ ಎಲ್ಲರಿಗೂ ಭೂಮಿ ಸಿಗುತ್ತೆ ಎಲ್ಲರೂ ಕೃಷಿ ಮಾಡಬಹುದು ಅಲ್ವಾ.ನನ್ನ ದೇಶ ಮುಂದು ವರೆಯುತ್ತೆ ಒಮ್ಮೆ ಯೋಚಿಸಿ.

3).ಸರಕಾರ :
ನೀವು ಸರಕಾರದ ಬಗ್ಗೆ ಚಿಂತಿಸುತಿದ್ದೀರಾ? ಬೇಡಾ? ನಮ್ಮ ದೇಶ ಉನ್ನತ ಮಟ್ಟಕ್ಕೆ ಎರುತ್ತೆ ಎರಡನೇ ಮಾತಿಲ್ಲ… ಬಡವರಿಗೆ ಉಂಬಳಿಯಾಗಿ ಹತ್ತು ಅಥವಾ ಹದಿನೈದುವರ್ಷ ಕೊಡುವುದು,ಕೃಷಿ ಭೂಮಿಯಿಂದ ಬರ್ತಕಂತ ಆದಾಯದಲ್ಲಿ ಸರಕಾರದ ಪಾಲನ್ನು ನಿಗಧಿ ಮಾಡಿ ಆ ಹಣವನ್ನು ಸರಕಾರಕ್ಕೆ ಚಾಚು ತಪ್ಪದೆ ತುಂಬಿಸಿಕೊಳ್ಳಬೇಕು. ಈ ಹೊಸ ಮಾದರಿಯ ಯೋಜನೆಯ ಎಲ್ಲ ವ್ಯವಸ್ಥೆಯನ್ನು ಸರಿದೂಗಿಸಲು ಅಧಿಕಾರಿಗಳನ್ನು ನೇಮಕ ಮಾಡಿದ್ದಲ್ಲಿ ನನ್ನ ದೇಶದ ಚಿತ್ರಣವೇ ಬದಲಾಗುತ್ತೆ. ಈ ಯೋಜನೆ ಎಲ್ಲರಿಗೂ ಉಪಯುಕ್ತವಾಗುವುದು, ಈ ಯೋಜನೆಯನ್ನು ಪ್ರತಿ ಹತ್ತುವರ್ಷಕ್ಕೆ ಬದಲಿಸುತ್ತಾ ಹೋದಲ್ಲಿ ಬಡವರು ಹುಡುಕಾಡಿದರು ಸಿಗಲ್ಲ… ಈ ಯೋಜನೆಯ ಲಾಭ ಯಾರಿಗೆ ಸಿಗುತ್ತೆ ಒಮ್ಮೆ ಯೋಚಿಸಿ.

ಒಟ್ಟಾಗಿ ಹೇಳುವದಾದರೆ ಈ ಯೋಜನೆಯ ಲಾಭ ಎಲ್ಲ ವರ್ಗದವರಿಗೂ ಸಿಗುತ್ತೆ ಅದಕ್ಕಿಂತ ಹೆಚ್ಚಾಗಿ ನಮ್ಮ ದೇಶ ಬಡತನ ಮುಕ್ತ ದೇಶ ಆಗುವುದು. ಈ ಯೋಜನೆಯಲ್ಲಿ ಬರುವ ಮಧ್ಯವರ್ಥಿಗಳಿಗೆ ಹಾಗೂ ದೇಶಕ್ಕೆ ಕಳಂಕ ತರುವ ಎಲ್ಲರಿಗೂ ಕಠಿಣ ಕ್ರಮ ತೆಗೆದುಕೊಂಡಲ್ಲಿ ನಮ್ಮ ದೇಶ ಉಜ್ವಲಗೊಳ್ಳುತ್ತೆ. ಈ ಯೋಜನೆಯ ಸಫಲತೆ ವಿಫಲತೆಯ ಬಗ್ಗೆ ನೀವು ಒಮ್ಮೆ ಯೋಚಿಸಿ.ಈ ಯೋಜನೆ ಕೇವಲ ಭೂಮಿ ಇಲ್ಲದ ರೈತ ಮತ್ತು ಬಡತಣಕ್ಕಿಂತಲೂ ಕೆಳಗೆ ಇರುವ ರೈತತಿಗೆ ಮಾತ್ರ ಎಂಬ ಸುತ್ತೋಲೆ ಹೊರಡಿಸುವುದು ಸೂಕ್ತ. ಖಾಸಗಿ ಒಡೆತನದಲ್ಲಿದ್ದ ಭೂಮಿಯನ್ನು ಸರಕಾರದ ಒಡೆತನಕ್ಕೆ ಮಾರ್ಪಡು ಮಾಡಿ ಭೂಮಿ ಇಲ್ಲದ ಕೃಷಿಕನಿಗೆ ಭೂಮಿ ಕೊಟ್ಟು ಅದರ ಲಾಭವನ್ನು ಸರಕಾರ ಮತ್ತು ಕೃಷಿಕನಿಗೆ ನೀಡುವುದು …. ಈ ಯೋಜನೆಯನ್ನು ಅನುಷ್ಠಾನ ಮಾಡಲು ಕೇಂದ್ರ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕು ಹೀಗೆ ಮಾಡುವುದರಿಂದ ಖಾಸಗಿ ಒಡೆತನ ಮಾಡುತ್ತಿರುವವರ ದರ್ಬಾರ್ ನಿಲ್ಲುವುದು ಕೃಷಿಕನಿಗೆ ಮತ್ತು ಸರಕಾರಕ್ಕೆ ಬಾರಿ ಪ್ರಮಾಣದ ಲಾಭವಾಗುವುದು.

ಈ ಯೋಜನೆ ಅನುಷ್ಠಾನಗೊಳಿಸಲು ಸ್ವಲ್ಪ ಕಷ್ಟವಾದರೂ ಸರಿ ಈ ಯೋಜನೆಯಿಂದ ಕೋಟ್ಯಂತರ ಬಡಜೀವಿಗಳ ಹೊಟ್ಟೆ ತನ್ನಗಾಗೂವುದು ಇದಕ್ಕಿಂತಲೂ ಮಿಗಿಲಾಗಿ ಭಾರತ ಬಡತನ ಮುಕ್ತ ದೇಶ ಆಗುವುದು…..

ಭೂಮಿಯೂ ಕೇವಲ ಕೆಲ ಜನರ ಸೋತ್ತಾಗಿದೆ. ಭೂಮಿಯನ್ನು ಎಲ್ಲರಿಗೂ ದೊರಕುವಂತೆ ಮಾಡುವುದು ಸೂಕ್ತ ಏಕೆಂದರೆ ಬೆಳೆಯುತ್ತಿರುವ ಜನಸಂಖ್ಯೆಯನ್ನು ಪರಿಗಣಿಸಿದರೆ ಇನ್ನೂ 30 ವರ್ಷಳಲ್ಲಿ ವಾಸಿಸಲು ಮನೆ ನಿರ್ಮಿಸಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗುತ್ತೆ. ಈ ಯೋಜನೆಯಿಂದ ದೇಶದ ಪ್ರಗತಿ ಕೂಡಾ ಕುಂಟಿತಗೊಳ್ಳುವುದು.
ಇದು ಎಲ್ಲ ವರ್ಗದವರಿಗೂ ಅನುಕೂಲವಾಗುವ ವಿಷಯವುಹೌದು ಒಮ್ಮೆ ಯೋಚಿಸಿ.

ಆನಂದ ಬಸಗೌಡ ಬಿರಾದರ

ಲೇಖನ :ಆನಂದ ಬಸಗೌಡ ಬಿರಾದರ


Join The Telegram Join The WhatsApp
Bharath Vaibhav
the authorBharath Vaibhav

Leave a Reply