Join The Telegram | Join The WhatsApp |
ಜೇಮ್ಸ್ ಕೆಮರೂನ್ ಅವರ ‘ಅವತಾರ್- ದಿ ವೇ ಆಫ್ ವಾಟರ್’ ಜಾಗತಿಕವಾಗಿ ₹7000 ಕೋಟಿ ಗಳಿಸಿದೆ. ಡಿ.16ರಂದು ತೆರೆ ಕಂಡು ಬಾಕ್ಸಾಫೀಸ್‌ನಲ್ಲಿ ಎರಡನೆ ವಾರವೂ ಭರ್ಜರಿ ಸದ್ದು ಮಾಡುತ್ತಿರುವ ಚಿತ್ರ, ಭಾರತದಲ್ಲಿ ₹300 ಕೋಟಿ ಗಳಿಕೆ ಕ್ಲಬ್ ಸೇರಿದೆ. ಗಳಿಕೆ ಪಟ್ಟಿಯಲ್ಲಿ ಲಾಲ್ ಸಿಂಗ್ ಚಡ್ಡಾ, ವಿಕ್ರಂ ವೇದದಂತಹ ಹಲವು ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿದೆ.
ಭಾರತದಲ್ಲಿ ಮೊದಲ ದಿನವೇ ₹20 ಕೋಟಿ ಮುಂಗಡ ಬುಕ್ಕಿಂಗ್ ಕಂಡಿದ್ದು, ಹಲವು ನಗರಗಳಲ್ಲಿ ಟಿಕೆಟ್ ದರ ₹2500-3000 ಆಗಿದ್ದರೂ ಜನ ಮುಗಿಬಿದ್ದು ಚಿತ್ರ ನೋಡಿದ್ದರು. ಚಿತ್ರ ತೆರೆಗೆ ಬಂದ 3 ದಿನದಲ್ಲಿ ₹100 ಕೋಟಿ ಗಳಿಸಿತ್ತು. ಅವೆಂಜರ್ಸ್ ನಂತರ ಭಾರತದಲ್ಲಿ ಅವತಾರ್-2 ದೊಡ್ಡ ಹಿಟ್ ಚಿತ್ರವಾಗಿದೆ. ಈ ವಾರವೂ ಭಾರತದಲ್ಲಿ ಚಿತ್ರದ ಗಳಿಕೆ ಉತ್ತಮವಾಗಿದ್ದು, ₹500 ಕೋಟಿ ಗಳಿಕೆ ಕ್ಲಬ್ ಸೇರಲಿದೆ ಎಂದು ತಜ್ಞರು ಹೇಳಿದ್ದಾರೆ.
Join The Telegram | Join The WhatsApp |