ಬೈಲಹೊಂಗಲ:- ನಗರದ ಪ್ರತಿಷ್ಠಿತ ಉದ್ಯಮಿಗಳಾದ ವಿಜಯ ಮೆಟಗುಡ್ಡ ಹಾಗೂ ಜಯರಾಜ ಮೆಟಗುಡ್ಡ ಅವರ ಬಸವ ಟೆಕ್ಸಟೈಲ್ಸ್ ಹಾಗೂ ಲೂದಿಯಾನಾದ ವರ್ಧಮಾನ ಟೆಕ್ಸಟೈಲ್ಸ್ ಸಹಯೋಗದಲ್ಲಿ ಜಪಾನ ದೇಶದ ಖ್ಯಾತ ಹತ್ತಿ ಉದ್ಯಮಿ ಓಸಿಮಾ ಅವರ ತಂಡವನ್ನು ಆಹ್ವಾನಿಸಿ, ಕುಂಠಿತವಾಗುತ್ತಿರುವ ಡಿ.ಸಿ.ಎಚ್ (DCH)ಹತ್ತಿ ಉದ್ಯಮವನ್ನು ಪುನಶ್ಚೇತನ ಮಾಡಿ ಅಧಿಕ ಇಳುವರಿ ಪಡೆಯಲು ಸಹಕಾರಿಯಾಗುವಂತೆ ನೆರವಾಗಿ ರೈತರ ಜಮೀನುಗಳಿಗೆ, ಅವರ ಮನೆಗಳಿಗೆ ಭೇಟಿ ನೀಡಿ ಅವಶ್ಯಕ ಮಾಹಿತಿಯನ್ನು ಬೈಲಹೊಂಗಲ ತಾಲೂಕಿನ ಹಲವಾರು ಗ್ರಾಮದ ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉದ್ಯಮಿ ಓಸಿಮಾ ಅವರು ಈ ಭಾಗದ ಹತ್ತಿಯು ಸಾಕಷ್ಟು ಫಲವತ್ತತೆಯನ್ನು ಹಾಗೂ ಉತ್ತಮ ಗುಣಮಟ್ಟವನ್ನು ಹೊಂದಿದೆ ಆದರೆ ಅದನ್ನು ಸರಿಯಾಗಿ, ಸುರಕ್ಷಿತವಾಗಿ ಬಿಡಿಸುವ ಮತ್ತು ಶೇಖರಿಸುವ ವಿಧಾನ ಸರಿಯಾಗಿರದ ಕಾರಣ ನಿಮ್ಮ ಹತ್ತಿ ಬೆಳೆಗೆ ಒಳ್ಳೆಯ ಬೆಲೆ ಸಿಗುತ್ತಿಲ್ಲ,
ಒಳ್ಳೆಯ ಬೆಲೆ ಸಿಗಬೇಕಾದರೆ ನೀವುಗಳು, ಹತ್ತಿಯನ್ನು ಬಿಡಿಸುವಾಗ ಹತ್ತಿಯಂತೆಯೆ ಮೃದುವಾಗಿ ತಲೆಗೆ ಕಾಟನ್ ಬಟ್ಟೆ ಕಟ್ಟಿಕೊಂಡು, ಕಾಟನ್ ಚೀಲಗಳನ್ನು ಬಳಸಿ ಹತ್ತಿ ಬಿಡಿಸುವುದು ನಂತರ ಅದನ್ನು ಕಾಟನ್ ಬಟ್ಟೆಗಳ ಚೀಲದಲ್ಲಿ ಶೇಖರಿಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ನಿಮಗೆ ಉತ್ತಮ ಬೆಲೆ ಸಿಗುತ್ತದೆ ಎಂದರು.
ಕನ್ನಡದಲ್ಲಿ ಅನುವಾದಿಸುತ್ತಾ ಮಾತನಾಡಿದ ಉದ್ಯಮಿ ವಿಜಯ ಮೆಟಗುಡ್ಡ ನಮ್ಮ ರೈತರು ಬೆಳೆಯುವ ಹತ್ತಿಯು ಉತ್ತಮವಾಗಿದ್ದರು, ಬಿಡಿಸುವ ಸಂದರ್ಭದಲ್ಲಿ ಮಹಿಳೆಯರ ಕೂದಲು , ಬಿಸಾಡಿದ ಪ್ಲಾಸ್ಟಿಕ್, ನೈಲಾನ್ ವಸ್ತುಗಳ ತುಂಡು, ಗುಟಕಾ ಚೀಟ, ಪ್ಲಾಸ್ಟಿಕ್ ಕಾಗದಗಳು ಹತ್ತಿಯೊಂದಿಗೆ ಸೇರಿ ಹತ್ತಿಯ ಗುಣಮಟ್ಟ ಹಾಳು ಮಾಡುತ್ತಿದೆ
ರೈತರು ಜಾಗರೂಕತೆಯಿಂದ ಇವುಗಳಿಂದ ಹತ್ತಿಯನ್ನು ಬಿಡಿಸಿ ಮಾರುಕಟ್ಟೆಗೆ ತಂದರೆ ಉತ್ತಮ ಬೆಲೆ ಸೀಗುವುದರಲ್ಲಿ ಸಂದೇಹವಿಲ್ಲ, ಹಾನಿಕಾರಕವಾದ ಪ್ಲಾಸ್ಟಿಕ್ ನಿಂದ ಮನುಷ್ಯನಿಗೆ ಮಾತ್ರವಲ್ಲ ನಮ್ಮ ಬೆಳೆಗಳಿಗೂ ಮಾರಕವಾವುದು ಹಾಗಾಗಿ ಪ್ಲಾಸ್ಟಿಕ್ ನಿಂದ ಜಾಗೃತಿ ವಹಿಸಿ ಬೆಳೆ ರಕ್ಷಣೆಗೆ ಕೈಜೋಡಿಸಿ ಎಂದರು
ಜಪಾನ್ ಆಧುನಿಕ ತಂತ್ರಜ್ಞಾನದಿಂದ ಮುಂದುವರಿದ ರಾಷ್ಟ್ರ ಎಂಬುದು ಗೋತ್ತಿರುವ ವಿಷಯ ಇಂದು ಆ ದೇಶದಿಂದ ನಮ್ಮ ಗ್ರಾಮದ ವರೆಗೆ ಬಂದು ತಿಳುವಳಿಕೆ ನೀಡುತ್ತಿದ್ದಾರೆ ಎಂದರೆ ನಮ್ಮ ಹತ್ತಿ ಉತ್ತಮ ಬೆಳೆ ಉತ್ತಮವಾಗಿದೆ ಅದನ್ನು ನಾವು ಚೆನ್ನಾಗಿ ಸಂರಕ್ಷಿಸಬೇಕೆಂದರು
ತಾಲೂಕಿನ ಹಲವಾರು ಗ್ರಾಮಗಳಲ್ಲಿ ಜಪಾನ್ ಉದ್ಯಮಿಗಳಿಂದ ಮಾಹಿತಿ ವಿನಿಮಯ ಮಾಡಿಕೊಳ್ಳುವ ಅವಕಾಶ ಒದಗಿಸಲು ನಮಗೆ ವರ್ಧಮಾನ ಟೆಕ್ಸಟೈಲ್ಸ್ ಉತ್ತಮ ಸಹಕಾರಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಜಪಾನ್ ಉದ್ಯಮಿಗಳಾದ ನೈಕೋ ಹಿಗಾಶಿ, ಕಜುಹಿರೊ ನೊಗುಚಿ, ವರ್ಧಮಾನ ಟೆಕ್ಸಟೈಲ್ಸ್ ನ ಸುಭಾಶಿಸ್ ಭಟ್ಟಾಚಾರಜಿ, ರಾಜನ್ ಜಿಂದಾಲ, ಪಂಕಜ ಸೆಕ್ಷೇನಾ, ರಜತ್ ಪ್ರಸಾರ್, ಹಾಗೂ ಬಸವ ಟೆಕ್ಸಟೈಲ್ಸ್ ನ ಸಿಬ್ಬಂದಿ, ವಿವಿಧ ಗ್ರಾಮಗಳ ರೈತರು ಉಪಸ್ಥಿತರಿದ್ದರು.
ವರದಿ – ಉಮೇಶ ಹಿರೇಮಠ