Join The Telegram | Join The WhatsApp |
ಬಾದಾಮಿ: ಭೂಸ್ವಾಧೀನಕ್ಕೆ ಸಂಬಂಧಪಟ್ಟ0 ತೇ 135 ದಿನಗಳಿಂದ ನಡೆಯುತ್ತಿರುವ ಬಾದಾಮಿ ತಾಲೂಕಿನ ಹಲ ಕುರ್ಕಿ ಗ್ರಾಮದ ರೈತರ ಅಹೋರಾತ್ರಿ ಧರಣಿಯ ರೈತರು ಇಂದು ಹಲ ಕುರ್ಕಿಯ ಎಲ್ಲ ಮಾರ್ಗಗಳ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು ಈಗಾಗಲೇ ಸ್ಥಳಕ್ಕೆ ಅಸಿಸ್ಟಂಟ್ ಕಮಿಷನರ್ ಕೆ.ಐ.ಡಿ. ಬಿ.ಅಧಿಕಾರಿ,ಪೊಲೀಸ್ ಅಧಿಕಾರಿಗಳು ಆಗಮಿಸಿ ರೈತರ ಜೊತೆ ಮಾತನಾಡಿ ರೈತರನ್ನು ಜಿಲ್ಲಾಧಿಕಾರಿ ಕಚೇರಿಗೆ ಬರುವಂತೆ ಹೇಳಿದಾಗ ಅದಕ್ಕೆ ರೈತರು ಒಪ್ಪಿಗೆ ಇಲ್ಲ ಎಂದು ಹೇಳಿ ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಭೂಸ್ವಾಧೀನ ಕೈಬಿಡುವಂತೆ ನಮಗೆ ಹೇಳಬೇಕು ಎಂದು ಪಟ್ಟು ಹಿಡಿದಿದ್ದು ಪ್ರತಿಭಟನೆ ಮಾಡಿ ನಮ್ಮ ಕೆಲಸ ಕಾರ್ಯಗಳು ಕೂಲಿ ಕೆಲಸ ಬಿಟ್ಟು ಸಾಕಾಗಿ ಹೋಗಿದೆ ಇವತ್ತು ತೀರ್ಮಾನ ಆಗಲೇಬೇಕು ಎಂದು ಆಕ್ರೋಶಗೊಂಡಿರುವ ರೈತ ಮುಖಂಡರು ಅಸಿಸ್ಟಂಟ್ ಕಮಿಷನರ್ ಎದುರು ಇಂದು ಸಂಜೆ 5 ಗಂಟೆಯವರೆಗೆ ಡೆಡ್ಲೈನ್ ಕೊಟ್ಟಿದ್ದಾರೆ.
ಮುಂದೆ ಆಗುವ ಅನಾ ಹುತಾಗಳಿಗೆ ಜಿಲ್ಲಾಡಳಿತ ಹಾಗೂ ಸಚಿವ ಮುರಗೇಶ್ ನಿರಾಣಿ ಹಾಗೂ ಸರಕಾರವೇ ನೇರ ಹೋನೆಯಾಗುತ್ತಾರೆ ಎಂದು ಆಕ್ರೋಶ ಹೊರಹಾಕಿದರು. ಬಿ. ಜೆ. ಪಿ.ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಗ್ರಾಮದ ಮುಖ್ಯ ವೃತ್ತದಲ್ಲಿ ಪ್ರತಿಭಟನಾಕಾರರು ಕುಳಿತು ಪ್ರತಿಭಟನೆ ನಡೆಸಿದರು.. ಪ್ರತಿಭಟನೆ ಉಗ್ರಸ್ವರೂಪ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಮಾದ್ಯಮದ ಎದುರು ಮಾತನಾಡಿದರು.
135 ದಿನ ಕಳೆದರು ಗ್ರಾಮಕ್ಕೆ ಆಗಮಿಸದ ಜಿಲ್ಲಾ ಅಧಿಕಾರಿ ಕಾದು ನೋಡಬೇಕಾಗಿದೆ
ವರದಿ:-ಕೆ. ಎಚ್. ಶಾಂತಗೇರಿ
Join The Telegram | Join The WhatsApp |