Join The Telegram | Join The WhatsApp |
ಧಾರವಾಡ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಧಾರವಾಡ, ಬೆಳಗಾವಿ ಜಿಲ್ಲೆ ಪ್ರವಾಸ ಕೈಗೊಂಡಿದ್ದು, ಇಂದು ಧಾರವಾಡದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.
ಕೇಂದ್ರ ಗೃಹ ಸಚಿವ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಅಧೀನ ಪ್ರದೇಶದಲ್ಲಿ ಸ್ಥಾಪನೆಗೊಳ್ಳುತ್ತಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ನೂತನ ಕ್ಯಾಂಪಸ್ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ್ದಾರೆ.
ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಭಾಗಿಯಾಗಿದ್ದಾರೆ.
ವಿಧಿವಿಜ್ಞಾನ ವಿಶ್ವವಿದ್ಯಾಲಯದ ಕುಲತಿಗಳು ಧಾರವಾಡದಲ್ಲಿ ಆರಂಭಗೊಳ್ಳುತ್ತಿರುವ ನಮ್ಮ ವಿವಿ ಕ್ಯಾಂಪಸ್ ಗೆ ಅಗತ್ಯ ಸಿಬ್ಬಂದಿ, ಪ್ರಯೋಗಾಲಯ ನೀಡಿ, ಮುಂದಿನ ದಿನಗಳಲ್ಲಿ ವಿಶ್ವಗುಣಮಟ್ಟದ ಸ್ವತಂತ್ರ ರಾಷ್ಟ್ರೀಯ ವಿಶ್ವವಿದ್ಯಾಲಯವಾಗಿ ರೂಪಿಸಲಾಗುವುದು.
ಅದರಂತೆ ಕೃಷಿ ವಿಶ್ವವಿದ್ಯಾಲಯ ಅಧೀನದ ಸುಮಾರು 46 ಎಕರೆ ಭೂಮಿಯನ್ನು ವಿವಿ ನಿರ್ಮಾಣಕ್ಕೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಧಾರವಾಡ ಐಐಟಿಯ ನೂತನ ಕ್ಯಾಂಪಸ್‍ವನ್ನು ಬರುವ ಮಾರ್ಚ ಮೊದಲ ವಾರದಲ್ಲಿ ಉದ್ಘಾಟಿಸಲು ಉದ್ದೇಶಿಸಲಾಗಿದೆ. ಪ್ರಧಾನಿಯವರು ಫೆಬ್ರವರಿ 15 ರ ನಂತರ ದಿನಾಂಕ ನಿಗದಿಗೊಳಿಸಲು ತಿಳಿಸಿದ್ದರು, ಇನ್ನೊಂದು ಬಾರಿ ನಾನೇ ಭೇಟಿ ನೀಡಿ, ಉದ್ಘಾಟನೆಗೆ ದಿನಾಂಕ ನಿಗಧಿಗೊಳಿಸಲಾಗುವುದು ಎಂದು ಅವರು ಹೇಳಿದರು.
Join The Telegram | Join The WhatsApp |