Ad imageAd image

ಕೊರೊನಾ ನಂತರ ಯುವ ಜನರ ಸಾವಿನ ಪ್ರಮಾಣದಲ್ಲಿ ಹೆಚ್ಚಳ

Bharath Vaibhav
ಕೊರೊನಾ ನಂತರ ಯುವ ಜನರ ಸಾವಿನ ಪ್ರಮಾಣದಲ್ಲಿ ಹೆಚ್ಚಳ
WhatsApp Group Join Now
Telegram Group Join Now

ನವದೆಹಲಿ : ಕೊರೊನಾ ನಂತರ ಜಾಗತಿಕವಾಗಿ ಯುವ ಜನರ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಅಮೆರಿಕದ ದ ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಆಘಾತಕಾರಿ ವರದಿ ನೀಡಿದೆ.

ದ ಜರ್ನಲ್ ಆಫ್ ದ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ (ಜೆಎಎಂಎ) ನೆಟ್‌ವರ್ಕ್‌ ಓಪನ್‌ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

ಅಮೆರಿಕದ ಯುವ ವಯಸ್ಕರಲ್ಲಿ (25ರಿಂದ 44 ವರ್ಷ ಪ್ರಾಯದವರು) 1999ರಿಂದ 2023ರ ವರೆಗೆ ಸಂಭವಿಸಿದ 33 ಲಕ್ಷಕ್ಕೂ ಅಧಿಕ ಸಾವನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಮಿನ್ನಸೋಟಾ ವಿಶ್ವವಿದ್ಯಾಲಯಸಹಿತ ಅನೇಕ ಸಂಸ್ಥೆಗಳ ಸಂಶೋಧಕರು ಅಧ್ಯಯನದಲ್ಲಿ ಭಾಗವಹಿಸಿದ್ದರು.

ಬಾಸ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಜಾಗತಿಕ ಆರೋಗ್ಯದ ಸಹ ಪ್ರಾಧ್ಯಾಪಕ ಆಂಡ್ನ ಸ್ಟೋಕ್ ಮಾತನಾಡಿ, ಕೊರೊನಾ ಅವಧಿಯಲ್ಲಿ ಸಾವಿನ ದರ ತೀವ್ರವಾಗಿ ಏರಿದ್ದು ಸಾಂಕ್ರಾಮಿಕೋತ್ತರದಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿಯೇ ಉಳಿದಿದೆ ಎಂದು ಸಂಶೋಧಕರು ಹೇಳಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!