This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಅಥಣಿಯಲ್ಲಿ ಹೆಚ್ಚುತ್ತಿರುವ ಕಳ್ಳತನ : ಜನರಲ್ಲಿ ಆತಂಕ

Join The Telegram Join The WhatsApp

ಅಥಣಿ:  ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಕೂಡ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಥಣಿ ಪಟ್ಟಣದ ನಿವಾಸಿಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನರ ನಿದ್ದೆಗೆಡಿಸಿದೆ.
ಅಥಣಿ ಪಟ್ಟಣದ ಪ್ರಮುಖ ಹೋಟೆಲ್, ಬಾರ್, ರೆಸ್ಟೋರೆಂಟ್ ಮತ್ತು ವಿವಿಧ ಕಚೇರಿಗಳ ಮುಂದೆ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಒಳಗಡೆ ಹೋಗಿ ಹೊರಗಡೆ ಬರುವುದರ ಒಳಗಾಗಿ ಚಾಲಾಕಿ ಕಳ್ಳರು ತಮ್ಮ ಕೈಚಳಕದಿಂದ ಬೈಕುಗಳ ಲಾಕ್ ಮುರಿದು ಬೈಕ್ ನೊಂದಿಗೆ ಪರಾರಿಯಾಗುತ್ತಾರೆ. ನಿನ್ನೆಯಷ್ಟೇ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಹೋಟೆಲ್ ಮುಂದಿನ ಬೈಕ್ ಸೇರಿದಂತೆ ಬಾರ್ ಅಂಡ್ ರೆಸ್ಟೋರೆಂಟ್ ಗಳ ಮುಂದಿನ ಎರಡು ಬೈಕುಗಳು ಸೇರಿದಂತೆ ಒಟ್ಟು ಮೂರು ಬೈಕುಗಳು ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿವೆ. ಹೋಟೆಲ್ ಗಳಲ್ಲಿ ಮತ್ತು ಇನ್ನಿತರ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಗಳನ್ನು ಅವಲೋಕಿಸಿದಾಗ ಚಾಲಾಕಿ ಕಳ್ಳ ಕೈಯಲ್ಲಿ ಒಂದು ಕೈಚಿಲ್ ಹಿಡಿದು, ತಲೆಗೆ ಕ್ಯಾಪ್ ಹಾಕಿ, ಮುಖಕ್ಕೆ ಮಾಸ್ಕ್ ಮಾಸ್ಕ್ ಧರಿಸಿಕೊಂಡು ತನ್ನಲ್ಲಿರುವ ಲಾಕರ್ ಬಳಸಿ ಸಲೀಸಾಗಿ ವಾಹನವನ್ನು ತೆಗೆದುಕೊಂಡು ಹೋಗಿರುವ ದೃಶ್ಯ ಸರಿಯಾಗಿದೆ.
ಇದಲ್ಲದೆ ಇತ್ತೀಚಿಗೆ ಕೊಕಟನೂರು ಗ್ರಾಮದಲ್ಲಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ
ಬಾಳುವ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಕಳೆದ ಒಂದು ತಿಂಗಳಿಂದ ತಾಲೂಕಿನ ಅತ್ಯಂತ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕಳ್ಳರು ರೈತಾಪಿ ಜನರ ಸಾಕು ಪ್ರಾಣಿಗಳನ್ನು ಕೂಡ ಬಿಡುತ್ತಿಲ್ಲ. ಎಮ್ಮೆ, ಎತ್ತು, ಆಕಳು, ಮೇಕೆಗಳನ್ನು ಕದ್ದು ಮರುದಿನ ನಡೆಯುವ ಜಾನುವಾರಗಳ ಸಂಖ್ಯೆಯಲ್ಲಿ ಮಾರಾಟ ಮಾಡುವ ಕಳ್ಳರು ಇದ್ದಾರೆ ಎಂದು ಅನೇಕ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೆ ಅಥಣಿ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಪ್ರತಿ ರವಿವಾರ ನಡೆಯುವ ವಾರದ ಸಂತೆಗೆ ದಿನ ಅನೇಕ ಜನರು ಬೆಲೆಬಾಳುವ ಮೊಬೈಲ್ ಮತ್ತು ಹಣವನ್ನ ಕಳೆದುಕೊಳ್ಳುತ್ತಾರೆ. ಕಳ್ಳರು ಎಷ್ಟು ಚಾಲಾಕಿ ಎಂದರೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಬೆಲೆಬಾಳುವ ಮೊಬೈಲ್ಗಳನ್ನು ಕದ್ದಿರುವ ವಿಚಾರ ಬೆಳಕಿಗೆ ಬಂದಿವೆ. ದ್ವಿಚಕ್ರ ವಾಹನ, ಜಾನುವಾರುಗಳು ಮತ್ತು ಚಿನ್ನಾಭರಣ ಕಳೆದುಕೊಂಡ ಅನೇಕ ಜನರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರಿಗೆ ಈ ಕದೀಮರನ್ನ ಹಿಡಿಯಲು ಆಗುತ್ತಿಲ್ಲವೋ ಅಥವಾ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲಯೋ ಎಂದು ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕಳ್ಳರ ಹಾವಳಿಗೆ ಜನರು ಭಯಭೀತರಾಗಿದ್ದು, ಪೊಲೀಸ್ ಅಧಿಕಾರಿಗಳು ತಕ್ಷಣವೇ ಈ ಕಳ್ಳರ ಹಾವಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ಅಬ್ಬಾಸ ಮುಲ್ಲಾ.


Join The Telegram Join The WhatsApp
Bharath Vaibhav
the authorBharath Vaibhav

Leave a Reply