This is the title of the web page
This is the title of the web page

Live Stream

October 2023
S M T W T F S
1234567
891011121314
15161718192021
22232425262728
293031  

| Latest Version 9.4.1 |

State News

ಚಂದ್ರನ ದಕ್ಷಿಣ ಧ್ರುವಕ್ಕೆ ಭಾರತದ ಉಪಗ್ರಹ

Join The Telegram Join The WhatsApp

ಹೊಸದಿಲ್ಲಿ: ಜಪಾನ್‌ ಸಹಯೋಗದಲ್ಲಿ ಶುಕ್ರ ಗ್ರಹ ಹಾಗೂ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸುವ ನಿಟ್ಟಿನಲ್ಲಿ ಉಪಗ್ರಹಗಳನ್ನು ಕಳುಹಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಮುಂದಾಗಿದೆ.

ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ಆಕಾಶ್‌ ತಣ್ತೀ ಸಮಾವೇಶದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅಹಮದಾಬಾದ್‌ ಮೂಲದ ಭೌತಿಕ ಸಂಶೋಧನ ಪ್ರಯೋಗಾಲಯದ ನಿರ್ದೇಶಕ ಅನಿಲ್‌ ಭಾರದ್ವಾಜ್‌ ಅವರು, “ಇದರ ಜತೆಗೆ ಮಂಗಳ ಗ್ರಹಕ್ಕೆ ಶೋಧಕ ಉಪ ಗ್ರಹ ಕಳುಹಿಸಲು ಇಸ್ರೋ ಯೋಜಿಸಿದೆ’ ಎಂದು ತಿಳಿಸಿದರು.

 

“ಆರಂಭಿಕ ಯೋಜನೆಗಳ ಪ್ರಕಾರ, ಚಂದ್ರನ ದಕ್ಷಿಣ ಧ್ರುವದ ಬಳಿಯ ಯೋಜಿತ ಸ್ಥಳದಲ್ಲಿ ಜಪಾನ್‌ ರಾಕೆಟ್‌ ಲ್ಯಾಂಡ್‌ ಆಗುತ್ತದೆ. ಅನಂತರ ಅದು ಇಸ್ರೋ ನಿರ್ಮಿಸಿದ ಲೂನಾರ್‌ ಲ್ಯಾಂಡರ್‌ ಮತ್ತು ರೋವರ್‌ ಅನ್ನು ಕಕ್ಷೆಗೆ ಸೇರಿಸುತ್ತದೆ. ಬಳಿಕ ಸೂರ್ಯನ ಬೆಳಕನ್ನು ನೋಡದ ಚಂದ್ರನ ಶಾಶ್ವತ ನೆರಳು ಪ್ರದೇಶಕ್ಕೆ ರೋವರ್‌ ಪ್ರಯಾ ಣಿಸುತ್ತದೆ’ ಎಂದು ಮಾಹಿತಿ ನೀಡಿದರು.

ಈ ಬಗ್ಗೆ ಜಪಾನೀಸ್‌ ಏರೋಸ್ಪೇಸ್‌ ಎಕ್ಸ್‌ಪ್ಲೊರೇಷನ್‌ ಏಜೆನ್ಸಿ(ಜೆಎಎಕ್ಸ್‌ಎ) ಜತೆಗೆ ಇಸ್ರೋ ಮಾತುಕತೆ ನಡೆಸುತ್ತಿದೆ. ಈ ಪ್ರದೇಶದ ಶೋಧನೆಯು ಆಸಕ್ತಿದಾಯಕವಾಗಿದೆ. ಯಾಕೆಂದರೆ ಪಿಎಸ್‌ಆರ್‌ ವಲಯದಲ್ಲಿ ಉಳಿ ದಿರುವ ಯಾವುದೇ ವಸ್ತುವು ಅನಾದಿ ಕಾಲದವರೆಗೆ ಆಳವಾಗಿ ಘನೀಕೃತವಾಗುತ್ತದೆ’ ಎಂದು ಅನಿಲ್‌ ಹೇಳಿದರು.

“ಆದಿತ್ಯ ಎಲ್‌-1 ಒಂದು ವಿಶಿಷ್ಟ ವಾದ ಮಿಷನ್‌ ಆಗಿದ್ದು, ಇದರಲ್ಲಿ ಪೇಲೋಡ್‌ ಹೊತ್ತೂಯ್ಯುವ 400 ಕೆ.ಜಿ. ಉಪಗ್ರಹವನ್ನು ಸೂರ್ಯನ ಸುತ್ತಲಿನ ಕಕ್ಷೆಯಲ್ಲಿ ಇರಿಸ ಲಾಗುವುದು. ಅದು ಲಾಗ್ರೇಂಜ್‌ ಪಾಯಿಂಟ್‌ ಎಲ್‌-1 ಎಂಬ ಬಿಂದು ವಿನಿಂದ ಸೂರ್ಯನನ್ನು ನಿರಂತರ ವಾಗಿ ವೀಕ್ಷಿಸಲಿದೆ’ ಎಂದು ಅವರು ವಿವರಿಸಿದರು.

“ಭೂಮಿಯಿಂದ 1.5 ಮಿಲಿಯನ್‌ ಕಿಲೋ ಮೀಟರ್‌ ದೂರದಲ್ಲಿರುವ ಕಕ್ಷೆಗೆ ಇದನ್ನು ಸೇರಿಸಲಾಗುತ್ತದೆ. ಜತೆಗೆ ಕರೋನಲ್‌ ಹೀಟಿಂಗ್‌, ಸೌರ ಮಾರುತದ ವೇಗವರ್ಧನೆ, ಕರೋನಲ್‌ ಮಾಸ್‌ ಎಜೆಕ್ಷನ್‌ ಪ್ರಾರಂ ಭಿಕ ಹಂತ, ಜ್ವಾಲೆಗಳು ಮತ್ತು ಭೂಮಿಯ ಸಮೀಪವಿರುವ ಬಾಹ್ಯಾ ಕಾಶ ಹವಾಮಾನವನ್ನು ಅರ್ಥ ಮಾಡಿ ಕೊಳ್ಳಲು ಈ ಉಪಗ್ರಹವು ಪ್ರಯತ್ನಿಸುತ್ತದೆ’ ಎಂದರು.

“ಆದಿತ್ಯ ಎಲ್‌-1 ಮತ್ತು ಚಂದ್ರ ಯಾನ-3 ಯೋಜನೆಗಳನ್ನು ಮುಂದಿನ ವರ್ಷ ಆದ್ಯತೆಯ ಮೇರೆಗೆ ಕೈಗೊಳ್ಳ ಲಾಗುವುದು. ಮುಂದಿನ ಹಂತ ದಲ್ಲಿ ಜಪಾನ್‌ ಸಹಯೋಗದಲ್ಲಿ ಶುಕ್ರ ಮತ್ತು ಚಂದ್ರನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಅನಿಲ್‌ ಭಾರದ್ವಾಜ್‌ ತಿಳಿಸಿದರು.

2025ಕ್ಕೆ ಮಂಗಳಯಾನ 2
ಇತ್ತೀಚೆಗಷ್ಟೇ ಮಂಗಳಯಾನ ಉಪಗ್ರಹ, ಇಸ್ರೋದ ಸಂಪರ್ಕದಿಂದ ಹೊರಹೋಗಿದೆ. ಹೀಗಾಗಿ ಇದರ ಕೆಲಸ ಮುಗಿದಿದೆ ಎಂದು ಘೋಷಿಸಲಾಗಿದೆ. 2015 ರಲ್ಲಿ ಮಂಗಳಯಾನ 2 ಮಿಷನ್‌ಗೆ ಇಸ್ರೋ ಸಿದ್ಧತೆ ನಡೆಸುತ್ತಿದೆ. ಎರಿ ಡೆನಿಯಾ ಬೆಸಿನ್‌ ನಲ್ಲಿ ಉಪಗ್ರಹವನ್ನು ಸಾಫ್ಟ್ ಲ್ಯಾಂಡಿಂಗ್‌ ಮಾಡಿಸುವ ಗುರಿ ಇಸ್ರೋದ್ದಾಗಿದೆ. ಇದು ಮಂಗಳ ಗ್ರಹದಲ್ಲಿರುವ ಪ್ರಾಚೀನ ಕೆರೆಯ ಭಾಗವಾಗಿದೆ. ಇದು ಒಂದು ವರ್ಷ ಕಾಲ ಮಂಗಳ ಗ್ರಹದ ಬಳಿ ಇರಲಿದೆ. ಹಾಗೆಯೇ 2030ರ ವೇಳೆಗೆ ಮಂಗಳಯಾನ 3 ಕೈಗೆತ್ತಿಕೊಳ್ಳಲಾಗು ತ್ತದೆ.


Join The Telegram Join The WhatsApp
Bharath Vaibhav
the authorBharath Vaibhav

Leave a Reply