Join The Telegram | Join The WhatsApp |
ಧಾರವಾಡ : ದಸರಾ ಪ್ರಯುಕ್ತ ಕಲಘಟಗಿ ತಾಲೂಕು ಹುಲಕೊಪ್ಪ ಗ್ರಾಮದಲ್ಲಿ ಕರಿಯಮ್ಮ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.ಗ್ರಾಮದ ದೇವತೆಯಾದ ಕರಿಯಮ್ಮದೇವಿಯ ಮೂರ್ತಿ ಯನ್ನು ಅದ್ದೂರಿಯಾಗಿ ಮೆರವಣಿಗೆಯ ಮೂಲಕ ಕೊಂಡೋಯ್ದರು.ಜಾನಪದ ಸೊಗಡಿನ ಕೋಲಾಟ, ಪ್ರದರ್ಶಿಸುತ್ತ ಹೊರಟರು ಹಾಗೂ ಊರಿನ ಯುವಕರು ಹಾಗೂ ಸಹಸ್ರಾರು ಜನರು ಭಾಗಿಯಾಗಿದ್ದರುಗ್ರಾಮದ ಪ್ರತಿಯೊಂದು ಮನೆಯವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ಅನ್ನಪ್ರಸಾದ ಕ್ಕೆ 1 ಕ್ವೀoಟಲ್ ಹೋಳಿಗೆಯನ್ನು ಗ್ರಾಮದವರೇ ಹೆಣ್ಣುಮಕ್ಕಳು ತಯಾರಿಸಿ ಪ್ರಸಾದ ನೀಡಿದರು ಗ್ರಾಮದೇವಿಯಾದ ಕರಿಯಮ್ಮದೇವಿಯ ಮೆರವಣಿಗೆಯಲ್ಲಿ, ಗ್ರಾಮದ, ಹಿರಿಯರು, ಯುವಕರು, ಹೆಣ್ಣುಮಕ್ಕಳು, ಹಾಗೂ ಅಕ್ಕ ಪಕ್ಕದ ಊರಿನವರು ಪಾಲ್ಗೊಂಡಿದ್ದರು
ವರದಿ: ವಿನಾಯಕ ಗುಡ್ಡದಕೇರಿ
Join The Telegram | Join The WhatsApp |