Join The Telegram | Join The WhatsApp |
ಇಲಕಲ್: ಸ್ಥಳೀಯ ಎಸ್.ವ್ಹಿ.ಎಮ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ ನವ್ಹೆಂಬರ ೦೪ ಮತ್ತು ೦೫ ರಂದು ಮಹಾಂತ ಗಂಗೋತ್ರಿ ಆವರಣದಲ್ಲಿ ಅಂತರ ವಲಯಮಟ್ಟದ ಮಹಿಳಾ ಹಾಗೂ ಪುರುಷರ ಪಂದ್ಯಾವಳಿ ಆಯೋಜಿಸಲಾಗಿದ್ದು, ೧೬ ಕ್ಕು ಹೆಚ್ಚು ತಂಡಗಳು ಭಾಗವಹಿಸಲಿದ್ದು, ವಿಶ್ವವಿದ್ಯಾಲಯದ ನಿಯಮಾನುಸಾರ ರೋಚಕ ಪಂದ್ಯಗಳು ನಡೆಯಲಿವೆ. ರಾಜ್ಯದ ವಿವಿದೆಡೆಯಿಂದ ೧೦ ಕ್ಕು ಹೆಚ್ಚು ನುರಿತ ತೀರ್ಪುಗಾರರು ಆಗಮಿಸಲಿದ್ದು ನಂತರದಲ್ಲಿ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆ ನಡೆಯಲಿವೆ.
ಪೂಜ್ಯ ಶ್ರೀ ಮ.ನಿ.ಪ್ರ ಗುರುಮಾಹಾಂತ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕ್ರೀಡಾಕೂಟ ಪ್ರಾರಂಭಿಸಲಾಗುವದು.
ಪ್ರಕಟಣೆ. ಡಾ ಕೆ ಸಿ ದಾಸ್ ಪ್ರಾಚಾರ್ಯರು ಎಸ್ ವಿ ಎಂ ಆಯುರ್ವೇದ ಮಹಾವಿದ್ಯಾಲಯ ಇಲಕಲ್ .
ವರದಿ : ದಾವಾಲ್ ಶೇಡಂ
Join The Telegram | Join The WhatsApp |